ಕುಶಾಲನಗರ, ಏ. 11: ಪಠ್ಯದೊಂದಿಗೆ ಸಾಹಿತ್ಯ ಹಾಗೂ ಸಾಂಸ್ಕøತಿಕ ಚಟುವಟಿಕೆಗಳ ಬಗ್ಗೆ ಆಸಕ್ತಿ ಬೆಳೆಸಿಕೊಂಡಲ್ಲಿ ಭವಿಷ್ಯದಲ್ಲಿ ಜೀವನ ರೂಪಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ರಂಗ ಕಲಾವಿದೆ ಎಂ.ಎಸ್. ಗೀತಾ ಹೇಳಿದರು.

ಕುಶಾಲನಗರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ನಡೆದ 2017-18ನೇ ಸಾಲಿನ ಕಾಲೇಜು ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಭಾಷಣ ಮಾಡಿದ ಅವರು, ವಿದ್ಯಾರ್ಥಿಗಳು ಯಾವ ಸಂದರ್ಭದಲ್ಲಿಯೂ ಇತರರಿಗೆ ಅವಲಂಬಿತರಾಗಬಾರದು. ತಮ್ಮ ಸಾಮಥ್ರ್ಯದ ಮೇಲೆ ನಂಬಿಕೆಯಿಟ್ಟು ಸಾಧಿಸುವ ದಿಟ್ಟ ಮನೋಭಾವ ಹೊಂದಿದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದರು.

ಯಾವದೇ ವಿಚಾರಗಳ ಕುರಿತು ಸತ್ಯಾಸತ್ಯತೆ ಬಗ್ಗೆ ಅರಿತು ಪ್ರತಿಕ್ರಿಯಿಸಬೇಕಿದೆ. ಸ್ವಂತ ಬುದ್ದಿಯನ್ನು ಬಳಸಿ ತಮ್ಮಲ್ಲಿ ಅಡಗಿರುವ ಪ್ರತಿಭೆಯ ಬೆಳವಣಿಗೆಗೆ ಚಿಂತನೆ ಹರಿಸಿಬೇಕಿದೆ ಎಂದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ಹಾಗೂ ನಿವೃತ್ತ ಶಿಕ್ಷಕ ಎಂ.ಹೆಚ್. ನಜೀರ್ ಅಹಮ್ಮದ್ ಮಾತನಾಡಿದರು.

ಕಾಲೇಜು ಪ್ರಾಂಶುಪಾಲರಾದ ಪ್ರೊ. ಪಿ.ಎಂ. ಸುಬ್ರಮಣ್ಯ ಅಧ್ಯಕ್ಷತೆ ಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪನ್ಯಾಸಕರುಗಳಾದ ಹೆಚ್.ಬಿ. ಲಿಂಗಮೂರ್ತಿ, ಪಿ.ಟಿ. ಕಾಶೀ ಕುಮಾರ್, ವಸಂತ ಕುಮಾರಿ, ಪ್ರೊ. ಸಿ. ಪುಟ್ಟರಾಜು, ಟಿ.ಎಂ. ಸುಧಾಕರ್, ರಮೇಶ್ ಚಂದ್ರ, ಐ.ಕೆ. ಪೂವಮ್ಮ, ಕಾಲೇಜು ಅಧೀಕ್ಷಕಿ ಮೀನಾಕ್ಷಿ, ವಿದ್ಯಾರ್ಥಿ ಸಮಿತಿ ಉಪಾಧ್ಯಕ್ಷ ಲೋಹಿತ್, ಮಹಿಳಾ ಕಾರ್ಯದರ್ಶಿ ರೇಶ್ಮಾ ಇದ್ದರು.

ವಿದ್ಯಾರ್ಥಿನಿ ಶ್ವೇತ ಪ್ರಾರ್ಥಿಸಿ, ಉಪನ್ಯಾಸಕ ನಂಜುಂಡಸ್ವಾಮಿ ನಿರೂಪಿಸಿದರು, ಆಲಿಯ ಭಾನು ಸ್ವಾಗತಿಸಿದರು, ಲಿಂಗಮೂರ್ತಿ ವಾರ್ಷಿಕ ವರದಿ ವಾಚಿಸಿದರು. ಕಾರ್ಯಕ್ರಮದಲ್ಲಿ ಸಾಂಸ್ಕøತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ವಿಜೇತರಾದವರಿಗೆ ಪ್ರೋತಾಹ ಬಹುಮಾನ ವಿತರಿಸಲಾಯಿತು.