ಸೋಮವಾರಪೇಟೆ,ಏ.10: ರಾಜ್ಯಮಟ್ಟದ ಸಾಹಿತ್ಯಾತ್ಮಕ, ಜಾನಪದ ಹಾಗೂ ಸಾಂಸ್ಕøತಿಕ ಸಂಸ್ಥೆಯಾದ ಮೈಸೂರು ಗ್ರಾಮಾಂತರ ಬುದ್ಧಿಜೀವಿಗಳ ಬಳಗ ಕೊಡಮಾಡುವ “ವಿಶ್ವಮಾನ್ಯ ಕನ್ನಡಿಗ” ಪ್ರಶಸ್ತಿಯನ್ನು ಸೋಮವಾರಪೇಟೆ ಸಾಹಿತಿಗಳು ಹಾಗೂ ಶಿಕ್ಷಕರುಗಳಾದ ರಾಣಿ ರವೀಂದ್ರ ಮತ್ತು ಎಲಿಜಬೆತ್ ಲೋಬೋ ಪಡೆದುಕೊಂಡಿದ್ದಾರೆ.

ಸಂಸ್ಥೆಯ 33ನೇ ವಾರ್ಷಿಕೋತ್ಸವದ ಅಂಗವಾಗಿ ಪ್ರೇಮಕವಿ ಕೆ.ಎಸ್.ನ. ನೆನಪಿನ ರಾಜ್ಯಮಟ್ಟದ ಸಾಹಿತ್ಯೋತ್ಸವ ಮೈಸೂರಿನ ರೋಟರಿ ಸಭಾಂಗಣ ದಲ್ಲಿ ಹಿರಿಯ ಸಾಹಿತಿ ಗಳಾದ ಪ್ರೊ. ಕೆ. ಭೈರವ ಮೂರ್ತಿಯವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭ ದಲ್ಲಿ ಪ್ರಶಸ್ತಿ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಹಿರಿಯ ಚಿಂತಕರು ಗಳಾದ ಡಾ. ಕೆ. ರಘುರಾಮ್ ವಾಜಪೇಯಿ, ಡಿ.ಟಿ. ಪ್ರಕಾಶ್, ಸಾಹಿತಿಗಳಾದ ಕೆ.ಎನ್. ಮಹಾಬಲ, ಡಾ. ಎ. ಪುಷ್ಪ ಅಯ್ಯಂಗಾರ್, ಎ. ಹೇಮಗಂಗಾ, ಮಂಜುಳಾ ಉಮೇಶ್, ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ, ಚಂಪಾ ಶಿವಣ್ಣ, ಭೇರ್ಯ ರಾಮಕುಮಾರ್ ಹಾಗೂ ಇನ್ನಿತರ ಗಣ್ಯರು ಇದ್ದರು.