ಮೂರ್ನಾಡು, ಏ. 10 : ಕಾಂತೂರು ಮೂರ್ನಾಡು ಶ್ರೀ ಪನ್ನಂಗಾಲ ತಾಯಿ ದೇವಾಲಯದ ವಾರ್ಷಿ ಕೋತ್ಸವ ತಾ.12 ಮತ್ತು 13ರಂದು ನಡೆಯಲಿದೆ. 12 ರಂದು ಬೆಳಗ್ಗೆ 9ಗಂಟೆಗೆ ದೇವರ ಶುದ್ಧಕಳಸ, ಭಂಡಾರ ತರುವದು, ಎತ್ತು ಪೋರಾಟ, ದೇವರ ದರ್ಶನ, ಕುರುಂದ ಭಾರಣಿ ನಡೆಯಲಿದೆ. 13ರಂದು ಬೆಳಗ್ಗೆ 8ಗಂಟೆಗೆ ದೇವರ ದರ್ಶನ, ಅನ್ನದಾನ, ಚಾಮುಂಡಿ ಉತ್ಸವ, ಕುರುಂದಾಟ, ದೇವರ ಜಳಕ ನಡೆಯಲಿದೆ ಎಂದು ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.