ಮಡಿಕೇರಿ, ಏ. 10: ಜೀವನದಿ ಕಾವೇರಿ ಪ್ರಜ್ಞಾಹೀನ ಸಮಾಜ ದಿಂದಾಗಿ ಕಲುಷಿತಗೊಳ್ಳುತ್ತಿದೆ ಎಂದು ಯುವ ಬ್ರಿಗೇಡ್ ಮುಖ್ಯಸ್ಥ ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ವಿಷಾದ ವ್ಯಕ್ತಪಡಿಸಿದರು.ಕೊಡಗು ಪ್ರೆಸ್ಕ್ಲಬ್ ವತಿಯಿಂದ ಪತ್ರಿಕಾಭವನದಲ್ಲಿಂದು ಆಯೋಜಿಸ ಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು. ಕಾವೇರಿ ನದಿ ನೀರಿಗಾಗಿ ವಿವಾದಗಳು, ಹೋರಾಟಗಳು ನಡೆಯುತ್ತಿವೆ. ಆದರೆ ಕಾವೇರಿ ನದಿ ನೀರು ವಿವಾದ ಸೃಷ್ಟಿಯಾಗದಂತೆ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಯಾರೂ ಚಿಂತಿಸುವದಿಲ್ಲ. ದಾಖಲಾತಿ ಯೊಂದರ ಪ್ರಕಾರ ಕಳೆದ ಒಂದು ದಶಕದಲ್ಲಿ ಕಾವೇರಿ ಶೇ. 50ರಷ್ಟು ಇಲ್ಲವಾಗಿದ್ದಾಳೆ. ಇದಕ್ಕೆ ಕಾರಣವೇನು ಎಂಬದರ ಬಗ್ಗೆ ಎಲ್ಲರೂ ಚಿಂತಿಸಬೇಕಿದೆ. ಪರಿಸರ ಸಂರಕ್ಷಣೆ ಯೊಂದಿಗೆ ತ್ಯಾಜ್ಯಗಳಿಂದ ನದಿ ಕಲುಷಿತಗೊಳ್ಳದಂತೆ ಎಚ್ಚರ ವಹಿಸಬೇಕಿದೆ ಎಂದು ಚಕ್ರವರ್ತಿ ಸೂಲಿಬೆಲೆ ಕಿವಿಮಾತು ಹೇಳಿದರು.
ಕಾವೇರಿ ನದಿ ಕಲುಷಿತ ಗೊಳ್ಳುವದನ್ನು ತಡೆಯುವ ನಿಟ್ಟಿನಲ್ಲಿ ಯುವ ಬ್ರಿಗೇಡ್ ವತಿಯಿಂದ ‘ಸ್ವಚ್ಛ ಕಾವೇರಿ ಜಾಗೃತಿ’ ಅಭಿಯಾನ ಹಮ್ಮಿಕೊಳ್ಳಲಾಗಿದೆ. ತಾ. 11ರಂದು (ಇಂದು) ತಲಕಾವೇರಿಯಲ್ಲಿ ಪೂಜೆ ಸಲ್ಲಿಸಿ ಅಭಿಯಾನಕ್ಕೆ ಮುಂದಡಿ ಇಡಲಾಗುತ್ತದೆ. ತಾ. 12ರಿಂದ ಅಧಿಕೃತವಾಗಿ ಸ್ವಚ್ಛ ಕಾವೇರಿ ಅಭಿಯಾನವನ್ನು ಪ್ರಾರಂಭ ಮಾಡಲಾಗುತ್ತದೆ. ಈ ಅಭಿಯಾನದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಯುವ ಬ್ರಿಗೇಡ್ನ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ ಸೂಲಿಬೆಲೆ ಕೊಡಗಿನ ಜನತೆ ಕೂಡ ಅಭಿಯಾನದಲ್ಲಿ ಯುವ ಬ್ರಿಗೇಡ್ನೊಂದಿಗೆ ಕೈಜೋಡಿಸುವಂತೆ ಮನವಿ ಮಾಡಿದರು. ನೆಲ್ಲಿಹುದಿಕೇರಿ, ಕುಶಾಲನಗರ, ರಾಮನಾಥ್ಪುರ ಹಾಗೂ ಶ್ರೀರಂಗಪಟ್ಟಣ ವ್ಯಾಪ್ತಿಗಳಲ್ಲಿ ಸ್ವಚ್ಛ ಕಾವೇರಿ ಅಭಿಯಾನ ಕೈಗೊಳ್ಳಲಾಗುತ್ತದೆ. ಕರಪತ್ರಗಳನ್ನು ಮನೆ ಮನೆಗಳಿಗೆ ತೆರಳಿ ವಿತರಿಸಿ ಜಾಗೃತಿ ಮೂಡಿಸುವ ಕೆಲಸವನ್ನು ಕೂಡ ಮಾಡಲಾಗುತ್ತದೆ ಎಂದರು.
ಪಿಂಡ ಪ್ರದಾನ ಮಾಡುವದು, ಮಾಲೆಗಳನ್ನು, ಕುಂಕುಮ ಇತ್ಯಾದಿ ಗಳನ್ನು ಹರಿಯ ಬಿಡುವದರಿಂದಲೂ ಕಾವೇರಿ ನದಿ ಕಲುಷಿತಗೊಳ್ಳುತ್ತಿದೆ. ಇದು ಧಾರ್ಮಿಕ ನಂಬಿಕೆಯಾದರೂ, ನದಿ ಪಾತ್ರಗಳಲ್ಲಿ ಈ ಕ್ರಿಯೆಗಳಿಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಅರ್ಚಕರುಗಳನ್ನು ಭೇಟಿ ಮಾಡಿ ಅವರ ಮನವೊಲಿಸುವ ಕೆಲಸ ಮಾಡಲಾಗುವದು ಎಂದರು. ಟಿಂಬರ್ ಮಾಫಿಯಾಗೆ ಸರ್ಕಾರಗಳೆ ಬೆಂಬಲವಾಗಿ ನಿಂತಿವೆ ಎಂದು ಆರೋಪಿಸಿದ ಚಕ್ರವರ್ತಿ ಸೂಲಿಬೆಲೆ ಟಿಂಬರ್ ಮಾಫಿಯಾದಿಂದಲೂ ಕಾವೇರಿ ನದಿ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಿದೆ ಎಂದು ಹೇಳಿದರು. ಕಾವೇರಿ ಸ್ವಚ್ಛತೆಗೆ ಸಂಬಂಧಿಸಿದಂತೆ ಹಸಿರು ಪೀಠಕ್ಕೆ ಪತ್ರ ಬರೆದು
ಸರ್ಕಾರ ಹಾಗೂ
ಚಕ್ರವರ್ತಿ ಹೇಳಿದ್ದು
*
*
*
*
*
*
*
*