ಗೋಣಿಕೊಪ್ಪಲು, ಏ. 11: ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಪ್ರಾಂಶುಪಾಲರಾಗಿ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಹಾಗೂ ಇತ್ತೀಚೆಗೆ ಮುಗಿದ ಕಾವೇರಿ ಕಾಲೇಜು ಸುವರ್ಣ ಮಹೋತ್ಸವದ ಯಶಸ್ಸಿನಲ್ಲಿ ಭಾಗಿಯಾದ ಪಟ್ಟಡ ಎ. ಪೂವಣ್ಣ ಮೇ 31 ರಂದು ನಿವೃತ್ತಿಯಾಗಲಿದ್ದು, ಇಂದು ಕಾವೇರಿ ಕಾಲೇಜು ಆವರಣದಲ್ಲಿ ಭಾವಪೂರ್ಣ ಬೀಳ್ಕೊಡುಗೆ ಏರ್ಪಡಿಸಲಾಗಿತ್ತು.

ಕಾವೇರಿ ಕಾಲೇಜು ಆಡಳಿತ ಮಂಡಳಿ, ಉಪನ್ಯಾಸಕ ವರ್ಗ, ಸಿಬ್ಬಂದಿ ವರ್ಗ, ವೀರಾಜಪೇಟೆ ಕಾವೇರಿ ಕಾಲೇಜು ಅಧ್ಯಾಪಕ ವರ್ಗ, ಆಪ್ತರು, ಹಿತೈಷಿಗಳು ಒಳಗೊಂಡಂತೆ ಸಂತೋಷ ಕೂಟದೊಂದಿಗೆ ಮನರಂಜನಾ ಕಾರ್ಯಕ್ರಮವನ್ನೂ ಏರ್ಪಡಿಸಲಾಗಿತ್ತು.

ಪೆÇ್ರ. ಪಿ.ಎ. ಪೂವಣ್ಣ ಅವರು ವಾಣಿಜ್ಯ ವಿಭಾಗದ ಉಪನ್ಯಾಸಕರಾಗಿ ವೀರಾಜಪೇಟೆ ಕಾವೇರಿ ಮಹಿಳಾ ಕಾಲೇಜಿನಲ್ಲಿ 1983 ರಿಂದ ಕಾರ್ಯನಿರ್ವಹಿಸುತ್ತಿದ್ದು, 2012 ರಲ್ಲಿ ಗೋಣಿಕೊಪ್ಪಲು ಕಾವೇರಿ ಕಾಲೇಜಿಗೆ ವರ್ಗವಾಗಿ ಬಂದರು. 2013-14 ನೇ ಸಾಲಿನಲ್ಲಿ ಪ್ರಾಂಶುಪಾಲರಾಗಿ ಅಧಿಕಾರ ವಹಿಸಿಕೊಂಡರು.

ಕಾವೇರಿ ಕಾಲೇಜು ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ. ಎ.ಸಿ. ಗಣಪತಿ, ರಾಜ್ಯ ವೈಲ್ಡ್‍ಲೈಫ್ ಫಸ್ಟ್ ಅಧ್ಯಕ್ಷ ಕೆ.ಎಂ. ಚಿಣ್ಣಪ್ಪ, ಉದ್ಯಮಿ ಹಾಗೂ ಕಾವೇರಿ ಕಾಲೇಜು ಹಳೇ ವಿದ್ಯಾರ್ಥಿ ಸಂಘದ ಪ್ರಮುಖ ಕೆ.ಎಂ. ಅಜಿತ್ ಅಯ್ಯಪ್ಪ ಅವರುಗಳು ಮಾತನಾಡಿದರು.

ಈ ಸಂದರ್ಭ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಪೆÇ್ರ. ಪೂವಣ್ಣ ಕಾಲೇಜಿನ ಅಭಿವೃದ್ಧಿಯಲ್ಲಿ ಆಡಳಿತ ಮಂಡಳಿ, ಸಹೊದ್ಯೋಗಿಗಳು, ಉಪನ್ಯಾಸಕ ವೃಂದ, ಸಿಬ್ಬಂದಿಗಳು, ಪೆÇೀಷಕ-ಪ್ರಾಧ್ಯಾಪಕ ವೃಂದ ಹಾಗೂ ಹಳೇ ವಿದ್ಯಾರ್ಥಿಗಳ ಸಂಘದ ನಿರ್ದೇಶಕರ ಸಹಕಾರ ತೃಪ್ತಿದಾಯಕವಾಗಿತ್ತು ಎಂದು ಅಭಿಪ್ರಾಯಪಟ್ಟರು.

ಕಾವೇರಿ ವಿದ್ಯಾಸಂಸ್ಥೆಯ ಮಾಜಿ ಅಧ್ಯಕ್ಷ ಕುಪ್ಪಂಡ ಚಿಣ್ಣಪ್ಪ, ಹಿರಿಯ ವಕೀಲ ಎ.ಟಿ. ಭೀಮಯ್ಯ, ಐ.ಆರ್. ಪ್ರಮೋದ್, ಕಾರ್ಯದರ್ಶಿ ಜಾಜಿ ಉತ್ತಪ್ಪ, ಪಾಲಿಬೆಟ್ಟದ ವಕೀಲ ಉತ್ತಪ್ಪ, ಅನೀಶ್ ಮಾದಪ್ಪ, ವಾಣಿ ಚಂಗಪ್ಪ, ಹಳೇ ವಿದ್ಯಾರ್ಥಿ ಸಂಘದ ಸಂಚಾಲಕಿ ಎಸ್.ಎಂ. ರಜನಿ, ಡಾ. ಶಿವಪ್ಪ ವೀರಾಜಪೇಟೆ ಪೆÇ್ರ. ನಾಚಪ್ಪ, ಪಕ್ಷಿ ತಜ್ಞ ಡಾ. ನರಸಿಂಹನ್ ಮುಂತಾದವರು ಉಪಸ್ಥಿತರಿದ್ದರು. ಕಾವೇರಿ ಕಾಲೇಜಿನ ವಸಂತಿ, ಪ್ರಾಧ್ಯಾಪಕ ತಿರುಮಲಯ್ಯ, ನಾಯಕ್, ಸುಧೀಶ್, ವೀರಾಜಪೇಟೆಯ ಅಮ್ಮುಣಿಚಂಡ ಪ್ರವೀಣ್ ಸಾಂಸ್ಕøತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಸಲ್ಡಾನ ಕಾರ್ಯಕ್ರಮ ನಿರೂಪಿಸಿದರು. ಪೆÇ್ರೀ ಪೂವಣ್ಣ ಮತ್ತು ಪತ್ನಿ ಅನುರಾಧಾ ಅವರನ್ನು ಇದೇ ಸಂದರ್ಭ ಅಭಿನಂದಿಸಲಾಯಿತು. - ಟಿ.ಎಲ್.ಎಸ್.