ನಾಪೆÇೀಕ್ಲು, ಏ. 11 : ಸಮೀಪದ ಕಕ್ಕುಂದಕಾಡು ಶ್ರೀ ವೆಂಕಟೇಶ್ವರ ದೇವಳದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ವಿಜೃಂಭಣೆಯಿಂದ ನೆರವೇರಿತು.

ಇದರ ಅಂಗವಾಗಿ ಗಣಹೋಮ, ಆಶ್ಲೇಷ ಬಲಿ, ಕಲಶ ಪೂಜೆಗಳು ಜರುಗಿದವು. ಸೋಮವಾರ ಮಿಥುನ ಲಗ್ನದಲ್ಲಿ ಅಷ್ಟಬಂಧ ಲೇಪನ ಬ್ರಹ್ಮಕಲಶಾಭಿಷೇಕ ಮಹಾಪೂಜೆ, ದೇವರ ಬಲಿ, ಬ್ರಹ್ಮ ವೇದವ್ಯಾಸ ತಂತ್ರಿ ಮತ್ತು ಶ್ರೀ ಶಂಕರನಾರಾಯಣ ತಂತ್ರಿಗಳ ನೇತೃತ್ವದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ, ಅನ್ನಸಂತರ್ಪಣೆ ನೆರವೇರಿತು.