ಸೋಮವಾರಪೇಟೆ, ಏ. 9: ತಾಲೂಕು ಭಾರತೀಯ ಜನತಾ ಪಾರ್ಟಿಯ ವತಿಯಿಂದ ಇಲ್ಲಿನ ಪಕ್ಷದ ಕಚೇರಿಯಲ್ಲಿ ಬಿಜೆಪಿ ಸಂಸ್ಥಾಪನಾ ದಿನವನ್ನು ಆಚರಿಸ ಲಾಯಿತು.

ಪಕ್ಷದ ನಗರಾಧ್ಯಕ್ಷ ಎಸ್.ಆರ್. ಸೋಮೇಶ್ ಮಾತನಾಡಿ, ಜನಸಂಘದ ನಂತರ ಉದಯವಾದ ಭಾರತೀಯ ಜನತಾ ಪಾರ್ಟಿ ಇಂದು ವಿಶ್ವದಲ್ಲಿಯೇ ಅತೀ ಹೆಚ್ಚು ಸದಸ್ಯ ರನ್ನು ಹೊಂದಿರುವ ರಾಜಕೀಯ ಸಂಘಟನೆಯಾಗಿ ಬೆಳೆದಿದೆ ಎಂದರು.

ಪಕ್ಷದ ತಾಲೂಕು ಪ್ರಧಾನ ಕಾರ್ಯದರ್ಶಿ ಮನುಕುಮಾರ್ ರೈ ಮಾತನಾಡಿ, ಪಕ್ಷದ ಧ್ಯೇಯೋದ್ದೇಶ ಗಳನ್ನು ಈಡೇರಿಸುವಲ್ಲಿ ಕಾರ್ಯ ಕರ್ತರು ಸ್ವಯಂ ಪ್ರೇರಣೆಯಿಂದ ಸಂಘಟನೆಯಲ್ಲಿ ಧುಮುಕಬೇಕು. ಆ ಮೂಲಕ ಹಿರಿಯ ಚೇತನಗಳ ಕನಸನ್ನು ನನಸಾಗಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಪಕ್ಷದ ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ್, ನಗರಾಧ್ಯಕ್ಷ ಶರತ್‍ಚಂದ್ರ, ಪ್ರಮುಖರಾದ ಕೊಮಾರಿ ಸತೀಶ್, ರಮೇಶ್, ಪಿ. ಮಧು, ಯೋಗೇಶ್, ಕೃಷ್ಣ, ಮಹೇಶ್, ಚಂದ್ರಶೇಖರ್, ಮುರುಳಿ, ಸಂತೋಷ್ ಕುಮಾರ್ ರೈ, ಗುರುಪ್ರಸಾದ್ ಸೇರಿದಂತೆ ಇತರರು ಭಾಗವಹಿಸಿದ್ದರು.