ಮಡಿಕೇರಿ, ಏ. 8: ನಿರಂತರವಾಗಿ ದೇಶವನ್ನು ಆಳಿರುವ ಎರಡು ರಾಷ್ಟ್ರೀಯ ಪಕ್ಷಗಳಿಗೆ ಪರ್ಯಾಯವಾಗಿ ಅಖಿಲ ಭಾರತ ಮಹಿಳಾ ಸಬಲೀಕರಣ ಪಕ್ಷದ ಮೂಲಕ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿ ಗಳನ್ನು ಕಣಕ್ಕಿಳಿಸುತ್ತಿ ರುವದಾಗಿ ಎಂಇಪಿಯ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಹೆಚ್.ಡಿ. ಬಸವರಾಜು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರದ ಹಿತಕ್ಕಾಗಿ ಉದ್ಯಮಿಯಾಗಿರುವ ಡಾ. ನೌಹೇರ ಶೇಕ್ ಎಂಇಪಿ ಪಕ್ಷವನ್ನು ಸ್ಥಾಪಿಸಿದ್ದು, ಜನಹಿತವೇ ಪಕ್ಷದ ಗುರಿಯಾಗಿದೆ ಎಂದರು. ಎಂಇಪಿಗೆ ರಾಷ್ಟ್ರೀಯ ಪಕ್ಷದ ಮಾನ್ಯತೆ ಇದ್ದು, ‘ವಜ್ರ’ದ ಚಿನ್ಹೆಯನ್ನು ಹೊಂದಿದೆ. ರಾಜ್ಯದ 224 ವಿಧಾನ ಸಭಾ ಕ್ಷೇತ್ರಗಳಲ್ಲಿ ಪಕ್ಷದ ಸಿದ್ಧಾಂತವನ್ನು ಜನರಿಗೆ ಮನವರಿಕೆ ಮಾಡಿಕೊಟ್ಟು ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಪಕ್ಷದ ಗೆಲುವಿಗಾಗಿ ಶ್ರಮಿಸಲಾಗುವದೆಂದು ತಿಳಿಸಿದರು. ಕೊಡಗು ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ಕೂಡ ಎಂಇಪಿಯ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದರು. ಎಂಇಪಿ ಪಕ್ಷ ಜಾತಿ, ಧರ್ಮದ ಆಧಾರದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವದಿಲ್ಲ. ಅಲ್ಲದೆ, ಮಹಿಳಾ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವದು ಎಂದರು. ಎರಡು ಬಾರಿ ಶಾಸಕರಾದ ತಮ್ಮನ್ನು ತಾವಿದ್ದ ಪಕ್ಷಗಳು ಸರಿಯಾಗಿ ಬಳಸಿಕೊ¼್ಳÀದ ಕಾರಣ ಪಕ್ಷಾಂತರ ಮಾಡಬೇಕಾಯಿತೆಂದು ಬಸವರಾಜು ಸಮರ್ಥಿಸಿಕೊಂಡರು.
ಗೋಷ್ಠಿಯಲ್ಲಿ ಎಂಇಪಿ ರಾಜ್ಯ ಸಂಚಾಲಕ ದಿನೇಶ್ ಗಾಣಿಗ ಹಾಗೂ ವಿವೇಕ್ ನಾಯಕ್ ಉಪಸ್ಥಿತರಿದ್ದರು.