ಸಿದ್ದಾಪುರ, ಏ. 7: ಕಾಡಾನೆಯೊಂದು ಗದ್ದೆಯ ಬಳಿ ಶೇಖರಿಸಿಟ್ಟಿದ್ದ ತಾಳೆ ಬೆಳೆಯ ಕಾಯಿಗಳನ್ನು ತಿಂದು ನಾಶಪಡಿಸಿರುವ ಘಟನೆ ಮಾಲ್ದಾರೆ ಗ್ರಾಮದಲ್ಲಿ ನಡೆದಿದೆ. ಮಾಲ್ದಾರೆ ಗ್ರಾಮದ ಕಾಫಿ ಬೆಳೆಗಾರ ಸಿ.ಎ. ನಂದಾ ಸುಬ್ಬಯ್ಯ ಅವರ ಗದ್ದೆಯ ಬಳಿ ಚೀಲದಲ್ಲಿ ತುಂಬಿಸಿಟ್ಟಿದ್ದ ತಾಳೆ ಬೆಳೆಯ ಕಾಯಿಗಳನ್ನು ಕಾಡಾನೆ ತಿಂದು ನಾಶಪಡಿಸಿದೆ. ಆದರೆ ಕಾಡಾನೆಯು ತಾಳೆ ಗೊಂಚಲಿನಲ್ಲಿ ಮುಳ್ಳಿರುವ ಕಾರಣ ಅದನ್ನು ತಿನ್ನದೆ ಸಮೀಪದಲ್ಲಿಟ್ಟಿದ್ದ ಚೀಲದಲ್ಲಿ ತುಂಬಿಸಿಟ್ಟಿದ್ದ ಕಾಯಿಗಳನ್ನು ತಿನ್ನುವ ಮೂಲಕ ತನ್ನ ಚಾಣಾಕ್ಷತನ ಪ್ರದರ್ಶಿಸಿದೆ.

ಸಿದ್ದಾಪುರ ಸಮೀಪದ ಕರಡಿಗೋಡು ಗ್ರಾಮದಲ್ಲಿ ಕಳೆದ ಕೆಲವು ದಿನಗಳಿಂದ ದೂರವಾಗಿದ್ದ ಕಾಡಾನೆಗಳ ಹಿಂಡು, ಇದೀಗ ಕರಡಿಗೋಡು ಗ್ರಾಮದ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದು, ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ.