ಗುಡ್ಡೆಹೊಸೂರು, ಏ. 7: ಇಲ್ಲಿನ ನರೇನ್ ಸುಬ್ಬಯ್ಯ ಕ್ರೀಡಾಂಗಣದಲ್ಲಿ ಮಾರ್ಚ್ 30 ರಿಂದ ಆರಂಭವಾದ ಲೀಗ್ ಪಂದ್ಯಗಳು ಮುಗಿದು ಕ್ವಾರ್ಟರ್ ಫೈನಲ್ ಪಂದ್ಯಗಳು ನಡೆಯುತ್ತಿವೆ. ಇಂದು ಸಹರಾ ಒಂಟಿಯಂಗಡಿ ಮತ್ತು ಹಾಲುಗುಂದ ತಂಡಗಳ ನಡುವೆ ನಡೆಯಿತು. ಈ ಪಂದ್ಯದಲ್ಲಿ ಸಹರಾ ತಂಡ ಜಯಗಳಿಸಿ ಸೆಮಿಫೈನಲ್‍ಗೆ ಪ್ರವೇಶಿಸಿತು. ತಾ. 8ರಂದು (ಇಂದು) ಅಂತಿಮ ಪಂದ್ಯ ನಡೆಯಲಿದೆ.