ಮಡಿಕೇರಿ, ಏ. 7: ಡೆಂಗ್ಯೂ, ಚಿಕನ್ ಗುನ್ಯಾ ರೋಗಗಳನ್ನು ತಡೆಗಟ್ಟುವ ಸಲುವಾಗಿ ಜಿಲ್ಲಾ ಸರ್ವೇಕ್ಷಣಾ ಘಟಕದ ವತಿಯಿಂದ ಲಾರ್ವಾ ಸಮೀಕ್ಷೆ ಹಾಗೂ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಡಿಕೇರಿ ಸರ್ವೇಕ್ಷಣಾ ಘಟಕದ ಆರೋಗ್ಯಾಧಿಕಾರಿ ನಾಗೇಂದ್ರಪ್ಪ ಅವರು ನಿನ್ನೆ ಭಗವತಿ ನಗರದ ಹೌಸಿಂಗ್ ಬೋರ್ಡ್‍ನ ಮನೆಗಳಿಗೆ ತೆರಳಿ ಮನೆ ಮಂದಿಗೆ ಆರೋಗ್ಯ ಶಿಕ್ಷಣ ನೀಡಿದರು.

ಸೊಳ್ಳೆಗಳ ಹಾವಳಿಯನ್ನು ತಡೆಯುವ ಸಲುವಾಗಿ ತೆಂಗಿನಚಿಪ್ಪು, ಡಬ್ಬ, ಟಯರ್ ಮತ್ತಿತರ ಯಾವದೇ ವಸ್ತುಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು, ಪರಿಸರವನ್ನು ಶುಚಿಯಾಗಿಡಬೇಕು ಎಂದು ನಾಗೇಂದ್ರ ಅವರು ತಿಳಿಹೇಳಿದರು.