ಭಾಗಮಂಡಲ, ಏ. 6: ಕೆದಂಬಾಡಿ ಕ್ರಿಕೆಟ್ ಕ್ಲಬ್ ವತಿಯಿಂದ ಚೆಟ್ಟಿಮಾನಿಯ ಕೆದಂಬಾಡಿ ಆಟದ ಮೈದಾನದಲ್ಲಿ ಗೌಡ ಕುಟುಂಬಗಳ ನಡುವೆ ನಡೆಯುತ್ತಿರುವ 25ನೇ ವರ್ಷದ ಕ್ರಿಕೆಟ್ ಹಬ್ಬದಲ್ಲಿ ಆತಿಥೇಯ ಕೆದಂಬಾಡಿ ಸೇರಿದಂತೆ ಪರ್ಲಕೋಟಿ, ದಂಬೆಕೋಡಿ, ಪುದಿಯನೆರವನ ತಂಡಗಳು ಸೆಮಿಫೈನಲ್‍ಗೆ ಪ್ರವೇಶ ಪಡೆದಿವೆ.

ಇಂದು ನಡೆದ ಪಂದ್ಯದಲ್ಲಿ ಕಾಂಗೀರ ತಂಡ 56 ರನ್ ಗಳಿಸಿದರೆ, ಬಂಗಾರಕೋಡಿ ತಂಡ 48 ರನ್ ಗಳಿಸಿ ಸೋಲನುಭವಿಸಿತು. ನಿಡ್ಯಮಲೆ ತಂಡ 49 ರನ್ ಗಳಿಸಿದರೆ, ದಂಬೆಕೋಡಿ ತಂಡ 51 ರನ್ ಗಳಿಸಿ ಗೆಲುವು ಸಾಧಿಸಿತು. ಸೆಟ್ಟೆಜನ ತಂಡ 69 ರನ್ ಗಳಿಸಿದರೆ, ಕೊಳಂಬೆ ತಂಡ 70 ರನ್ ಗಳಿಸಿ ಗುರಿ ಸಾಧಿಸಿತು.

ಪುದಿಯನೆರವನ ತಂಡ 118 ರನ್ ಗಳಿಸಿದರೆ, ಉತ್ತರವಾಗಿ ಆಡಿದ ಕಾಂಗೀರ ತಂಡ 100 ರನ್ ಕಲೆ ಹಾಕಿತ್ತಾದರೂ 18 ರನ್‍ಗಳ ಅಂತರದಿಂದ ಸೋಲನುಭವಿಸಿತು. ದಂಬೆಕೋಡಿ ತಂಡ 75 ರನ್ ಗಳಿಸಿದರೆ, ಉಳುವಾರನ ತಂಡ 71 ರನ್ ಮಾತ್ರ ಗಳಿಸಿ ಸೋಲನುಭವಿಸಿತು. ಕೊಳಂಬೆ ತಂಡ 32 ರನ್ ಗಳಿಸಿದರೆ, ಪರ್ಲಕೋಟಿ ತಂಡ 33 ರನ್‍ಗಳಿಸಿ ಗೆಲುವು ಸಾಧಿಸಿತು. ಆತಿಥೇಯ ಕೆದಂಬಾಡಿ ತಂಡ 59 ರನ್ ಗಳಿಸಿದರೆ, ಚೆರಿಯಮನೆ ತಂಡ 41 ರನ್ ಗಳಿಸಿ ಸೋಲನುಭವಿಸಿತು. ತಾ. 7 ರಂದು (ಇಂದು) ಸೆಮಿಫೈನಲ್ ಹಾಗೂ ಅಂತಿಮ ಪಂದ್ಯಗಳು ನಡೆಯಲಿವೆ.