ಸೋಮವಾರಪೇಟೆ,ಏ.5: ಆಧ್ಯಾತ್ಮ ಗುರು ಶ್ರೀ ರವಿಶಂಕರ್ ಗುರೂಜಿ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ವ್ಯಕ್ತಿ ವಿಕಾಸ ಕೇಂದ್ರದ ವತಿಯಿಂದ ತಾ. 10ರಂದು ಇಲ್ಲಿನ ಶ್ರೀರಾಮ ಮಂದಿರದಲ್ಲಿ ಸಂಜೆ 5.30ರಿಂದ ಸತ್ಸಂಗ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಸಂಚಾಲಕಿ ರಾಗಿಣಿ ತಿಳಿಸಿದ್ದಾರೆ.ಸಂಸ್ಥೆಯ ಸೂರ್ಯಪಾದ ಸ್ವಾಮೀಜಿ(ಛಾಯಣ್ಣ) ಅವರ ನೇತೃತ್ವದಲ್ಲಿ ಅಂದು ಸಂಜೆ 5.30ರಿಂದ 8 ಗಂಟೆಯವರೆಗೆ ಸತ್ಸಂಗ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.