ಮಡಿಕೇರಿ, ಏ. 4: ವಾಂಡರರ್ಸ್ ಸ್ಪೋಟ್ರ್ಸ್ ಕ್ಲಬ್ ಮತ್ತು ಮ್ಯಾನ್ಸ್ ಹಾಕಿ ಅಕಾಡೆಮಿ ಆಶ್ರಯದಲ್ಲಿ ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಉಚಿತ ಮಕ್ಕಳ ಬೇಸಿಗೆ ಶಿಬಿರದಲ್ಲಿ ನುರಿತರು ಆಗಮಿಸಿ ಮಕ್ಕಳಿಗೆ ಮಾರ್ಗದರ್ಶನ ನೀಡಿದರು.
ಕನ್ನಂಡಬಾಣೆ ನಿವಾಸಿ, ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅಂತಾರಾಷ್ಟ್ರೀಯ ಅಥ್ಲೆಟ್ ಹಾಗೂ ಇದೀಗ ಏಷಿಯನ್ ಗೇಮ್ಸ್‍ಗೆ ತರಬೇತಿ ಪಡೆಯುತ್ತಿರುವ ಬಿ.ಸಿ. ತಿಲಕ್ ಹಾಗೂ ಸಾಯಿ ಅಥ್ಲೆಟಿಕ್ ತರಬೇತುದಾರ ಬಿ.ಸಿ. ಉಮೇಶ್ ಅವರುಗಳು ಆಗಮಿಸಿ, ಮಾರ್ಗದರ್ಶನ ನೀಡಿದರು. ಇಂತಹ ಶಿಬಿರಗಳ ಸದುಪಯೋಗಪಡಿಸಿಕೊಂಡು, ಏಕಾಗ್ರತೆಯಿಂದ ಕಲಿತು ಜೀವನದಲ್ಲಿ ಯಶಸ್ಸು ಸಾಧಿಸುವಂತೆ ಕಿವಿಮಾತು ಹೇಳಿದರು. ತಿಲಕ್ ಹತ್ತು ದಿನಗಳ ಕಾಲ ರಜೆಯಲ್ಲಿದ್ದು, ಪ್ರತಿದಿನ ಆಗಮಿಸಿ, ಮಕ್ಕಳಿಗೆ ತರಬೇತಿ ನೀಡುವದಾಗಿ ಹೇಳಿದರು.