*ಗೋಣಿಕೊಪ್ಪಲು, ಏ. 4: ಅಮ್ಮತ್ತಿ ಶ್ರೀ ನಿತ್ಯ ಚೈತನ್ಯ ಮಡಪುರ, ಶ್ರೀ ಮುತ್ತಪ್ಪ ದೇವಸ್ಥಾನದ 44ನೇ ವರ್ಷದ ಮುತ್ತಪ್ಪ ತೆರೆ ಅದ್ದೂರಿಯಿಂದ ನಡೆಯಿತು.

ಸಾವಿರಾರು ಭಕ್ತಾದಿಗಳು ಮುತ್ತಪ್ಪ ಹಾಗೂ ಇತರ ದೇವರ ತೆರೆಗಳ ದರ್ಶನ ಪಡೆದು ಹರಕೆ ಪೂಜೆ ಕಾರ್ಯಗಳನ್ನು ನೆರವೇರಿಸುವ ಮೂಲಕ ಉತ್ಸವವನ್ನು ಆಚರಿಸಿದರು.

ಗಣಪತಿ ಹೋಮ, ದ್ವಜಾರೋಹಣ, ಮುತ್ತಪ್ಪ ಮಲೆ ಇಳಿಯುವದು, ದೀಪಾರಾಧನೆ, ಮುತ್ತಪ್ಪನ ವೆಳ್ಳಾಟಂ, ಶಸ್ತಾಪ್ಪನ ವೆಳ್ಳಾಟಂ, ಕಂಡಕರ್ಣನ ವೆಳ್ಳಾಟಂ, ವಿಷ್ಣುಮೂರ್ತಿ ವೆಳ್ಳಾಟಂ ನಡೆದವು.

ಗುಳಿಗೆನ ತೆರೆ, ಕಂಡಕರ್ಣನ ತೆರೆ, ಮುತ್ತಪ್ಪ, ತಿರುವಪ್ಪನ ತೆರೆ, ಶಾಸ್ತಪ್ಪನ ತೆರೆ, ಪೆÇಟ್ಟನ್ ತೆರೆ, ವಸುರಿ ಮಲೆ ತೆರೆ ವಿಷ್ಣುಮೂರ್ತಿ ತೆರೆ ನಡೆಯಿತು. ಭಕ್ತಧಿಗಳಿಗೆ ಮಧ್ಯಾಹ್ನದ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಈ ಸಂದರ್ಭ ದೇವಸ್ಥಾನ ಸಮಿತಿ ಅಧ್ಯಕ್ಷ ಸುವಿನ್ ಗಣಪತಿ, ಕಾರ್ಯದರ್ಶಿ ಬಾಲಕೃಷ್ಣ ಹಾಗೂ ಆಡಳಿತ ಮಂಡಳಿ ಸದಸ್ಯರು ಹಾಗೂ ಭಕ್ತಾಧಿಗಳು ಹಾಜರಿದ್ದರು.