ಮಡಿಕೇರಿ, ಏ. 4: ಕರ್ನಾಟಕ ರಾಜ್ಯ ಕ್ರಿಕೆಟ್ ಅಕಾಡೆಮಿಯ ಮಂಗಳೂರು ವಲಯದ ವತಿಯಿಂದ ಅಂತರ ಜಿಲ್ಲಾ ಕ್ರಿಕೆಟ್ ಪಂದ್ಯಾವಳಿಗಾಗಿ ಆಟಗಾರರ ಆಯ್ಕೆ ಶಿಬಿರ ಏರ್ಪಡಿಸಿದ್ದು, ಕೊಡಗು ಜಿಲ್ಲಾ ತಂಡಕ್ಕೆ ಆಯ್ಕೆ ಶಿಬಿರ ತಾ. 14 ರಿಂದ 16ರ ವರೆಗೆ ನಡೆಯಲಿದೆ. 14 ವರ್ಷದೊಳಗಿನವರ ತಂಡಕ್ಕೆ ತಾ. 14 ರಂದು ಆಯ್ಕೆ ನಡೆಯಲಿದ್ದು, 1.9.2004ರ ನಂತರ ಜನಿಸಿದವರು ಭಾಗವಹಿಸಬಹುದು.

16 ವರ್ಷದೊಳಗಿನ ತಂಡಕ್ಕೆ ತಾ. 15 ರಂದು ಆಯ್ಕೆ ನಡೆಯಲಿದ್ದು, 1.9.2002ರ ನಂತರ ಜನಿಸಿರಬೇಕು. 19 ವರ್ಷದೊಳಗಿನ ತಂಡಕ್ಕೆ ತಾ. 16 ರಂದು ಆಯ್ಕೆ ನಡೆಯಲಿದ್ದು, 1.9.1999ರ ನಂತರ ಜನಿಸಿದವರು ಭಾಗವಹಿಸಬಹುದಾಗಿದೆ.

ಮಡಿಕೇರಿಯ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ ಮೈದಾನದಲ್ಲಿ ಆಯ್ಕೆ ನಡೆಯಲಿದ್ದು, ಆಸಕ್ತರು ಜನನ ಪ್ರಮಾಣ ಪತ್ರದೊಂದಿಗೆ ಬಿಳಿ ಸಮವಸ್ತ್ರದಲ್ಲಿ ಬೆಳಿಗ್ಗೆ 8.30ಕ್ಕೆ ಹಾಜರಿರಬೇಕು. ಹೆಚ್ಚಿನ ಮಾಹಿತಿಗೆ ಮೊ. 9980060322, 9480073688 ಅನ್ನು ಸಂಪರ್ಕಿಸಬಹುದಾಗಿದೆ.

14 ವರ್ಷದೊಳಗಿನವರ ಆಯ್ಕೆ ಮಡಿಕೇರಿ ಹಾಗೂ ಗೋಣಿಕೊಪ್ಪಲು ಕಾಪ್ಸ್‍ನಲ್ಲಿ ಎರಡೂ ಕಡೆಗಳಲ್ಲಿ ನಡೆಯಲಿದೆ ಎಂದು ವಾಂಡರರ್ಸ್ ಸ್ಪೋಟ್ರ್ಸ್ ಕ್ಲಬ್‍ನ ಕಾರ್ಯದರ್ಶಿ ರಘು ಮಾದಪ್ಪ ತಿಳಿಸಿದ್ದಾರೆ.