ಶ್ರೀಮಂಗಲ, ಏ. 4 : ಶ್ರೀ ವಗರೆ ಈಶ್ವರ-ಅಯ್ಯಪ್ಪ ದೇವಸ್ಥಾನ ಸಮಿತಿ ಹಾಗೂ ಕೊಡವ ತಕ್ಕ್ ಎಳ್ತ್‍ಕಾರಡ ಕೂಟದ ಜಂಟಿ ಆಶ್ರಯದಲ್ಲಿ ತಾ. 5ರಂದು (ಇಂದು) ಸಂಜೆ 4.30 ಗಂಟೆಗೆ ಟಿ. ಶೆಟ್ಟಿಗೇರಿ ಸಮೀಪದ ಶ್ರೀ ವಗರೆ ಈಶ್ವರ-ಅಯ್ಯಪ್ಪ ದೇವಸ್ಥಾನ ದಲ್ಲಿ ಕೊಡವ ತಕ್ಕ್ ಎಳ್ತ್‍ಕಾರಡ ಕೂಟದ ಜನಪ್ರಿಯ ಕೊಡವ ಸಾಹಿತ್ಯ ಯೋಜನೆಯ ಲೇಖಕಿ ಉಳುವಂಗಡ ಕಾವೇರಿ ಉದಯ ಅವರು ಬರೆದ 153ನೇ ಹೆಜ್ಜೆಯ ಹಾಗೂ ಲೇಖಕಿ ಚೊಟ್ಟೆಯಾಂಡಮಾಡ ಲಲಿತ ಕಾರ್ಯಪ್ಪ ಅವರು ಬರೆದ 154ನೇ ಹೆಜ್ಜೆಯ ಎರಡು ನೂತನ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಗುವದು.

ಕೂಟದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ವಗರೆ ಈಶ್ವರ-ಅಯ್ಯಪ್ಪ ದೇವಸ್ಥಾನ ಸಮಿತಿಯ ಅಧ್ಯಕ್ಷ ಕಟ್ಟೇರ ಈಶ್ವರ, ತಕ್ಕ ಮುಖ್ಯಸ್ಥ ಕಟ್ಟೇರ ಅಚ್ಚಪ್ಪ, ಪುಸ್ತಕ ಪ್ರಕಟಣೆಯ ಪ್ರಾಯೋಜಕರಾದ ಕಟ್ಟೇರ ವಿಶ್ವನಾಥ್, ಅಪ್ಪನೆರವಂಡ ಶಾಂತಿ ಅಚ್ಚಪ್ಪ, ಪುಸ್ತಕ ಲೇಖಕಿ ಯರಾದ ಉಳುವಂಗಡ ಕಾವೇರಿ ಉದಯ ಹಾಗೂ ಚೊಟ್ಟೆಯಾಂಡಮಾಡ ಲಲಿತಾ ಕಾರ್ಯಪ್ಪ ಭಾಗವಹಿಸಲಿದ್ದಾರೆ.

ಉತ್ಸವ : ಶ್ರೀ ವಗರೆ ಈಶ್ವರ-ಅಯ್ಯಪ್ಪ ದೇವರ ವಾರ್ಷಿಕೋತ್ಸವದ ಪ್ರಯುಕ್ತ ಪೂರ್ವಾಹ್ನ 10 ಗಂಟೆಯಿಂದ ಮಹಾಪೂಜೆ, ಅಪರಾಹ್ನ 3 ಗಂಟೆಗೆ ಕಟ್ಟೇರ ಐನ್ ಮನೆಯಿಂದ ತಕ್ಕ ಮುಖ್ಯಸ್ಥರನ್ನೊಳ ಗೊಂಡು ಭಂಡಾರ ತರುವದು, 3.30ಕ್ಕೆ ಎತ್ತ್‍ಮಂಗಲ, 4 ಗಂಟೆಗೆ ತೆಂಗಿನ ಕಾಯಿಗೆ ಗುಂಡು ಹೊಡೆಯುವದು, 4.15ಕ್ಕೆ ಮಕ್ಕಳಿಗೆ ತೆಂಗಿನ ಕಾಯಿ ಎಳೆಯುವ ಸ್ಪರ್ಧೆ, ಸಂಜೆ 5.30ಕ್ಕೆ ಕೆರಳದ ತಂಡದಿಂದ ವಿಶೇಷ ಚಂಡೆ ಮೇಳ, 6 ಗಂಟೆಗೆ ದೇವರ ದರ್ಶನ ಹಾಗೂ ಅವಭೃಥÀ ಸ್ನಾನ ನೆರವೇರಲಿದೆ.