ನಾಪೆÇೀಕ್ಲು, ಏ. 4: ರಾಜ್ಯ ಎಸ್‍ಎಸ್‍ಎಫ್ ವತಿಯಿಂದ ನಾಪೆÇೀಕ್ಲು ಸಮೀಪದ ಚೆರಿಯಪರಂಬುವಿನ ಸಾದಿ ಮಹಲ್‍ನಲ್ಲಿ ಮತದಾನ ಜಾಗೃತಿ ಸಭೆ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಎಸ್‍ಎಸ್‍ಎಫ್ ಜಿಲ್ಲಾ ಅಧ್ಯಕ್ಷ ಕರೀಂ ಫಾಝ್ಲಿ ಹಾಕತ್ತೂರ್, ಎಸ್‍ಎಸ್‍ಎಫ್ ಕಾರ್ಯಕರ್ತರು ಯಾವದೇ ರಾಜಕೀಯ ಪಕ್ಷದಲ್ಲಿ ಸಕ್ರಿಯವಾಗಿ ಭಾಗವಹಿಸದೆ ಪ್ರಜಾಪ್ರಭುತ್ವ ಭಾರತದ ಸಂವಿಧಾನವನ್ನು ಗೌರವಿಸಿ ನಾಡಿನ ಜನರ ಒಳಿತಿಗಾಗಿ ಶ್ರಮಿಸುತ್ತಿದ್ದಾರೆ. ಇಂತಹ ಅಭ್ಯರ್ಥಿಗಳನ್ನು ವಿಧಾನಸಭೆ ಚುನಾವಣೆಗೆ ಆಯ್ಕೆ ಮಾಡಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಪೆÇೀಕ್ಲು ಎಸ್‍ಎಸ್‍ಎಫ್ ಅಧ್ಯಕ್ಷ ರಫೀಕ್ ಲತೀಫಿ ವಹಿಸಿದ್ದರು.

ಈ ಸಂದರ್ಭದಲ್ಲಿ ಎಸ್‍ಎಸ್‍ಎಫ್ ರಾಜ್ಯ ಕ್ಯಾಂಪಸ್ ಕಾರ್ಯದರ್ಶಿ ಯಾಖೂಬ್ ಮಾಸ್ಟರ್ ಕೊಳಕೇರಿ, ಜಿಲ್ಲಾ ಉಪಾಧ್ಯಕ್ಷ ನಝೀರ್ ಬಾಖವಿ, ಅಬ್ದುಲ್ ಖಾದರ್, ಕಾರ್ಯದರ್ಶಿ ಝಕರಿಯ್ಯ ಕೊಂಡಗೇರಿ, ಜಿಲ್ಲಾ ಸಮಿತಿ ಸದಸ್ಯ ಅಬ್ದುಲ್ಲ ಹಾಗೂ 26 ಶಾಖೆಗಳ ಕಾರ್ಯಕರ್ತರು, ಪದಾಧಿಕಾರಿಗಳು ಇದ್ದರು