ಶನಿವಾರಸಂತೆ, ಏ. 4: ಸಮೀಪದ ಗುಡುಗಳಲೆಯ ಆರ್.ವಿ. ಕಲ್ಯಾಣ ಮಂಟಪದಲ್ಲಿ ರೋಟರಿ ಕ್ಲಬ್ ವತಿಯಿಂದ ನಡೆದ ಸೌಹಾರ್ದ ಸಮಾರಂಭವನ್ನು ರೋಟರಿ ಗವರ್ನರ್ ಸುರೇಶ್ ಚಂಗಪ್ಪ ಉದ್ಘಾಟಿಸಿದರು.

ಅಲ್ಲದೆ ಶನಿವಾರಸಂತೆಯ ರೋಟರಿ ಕ್ಲಬ್ 1 ವರ್ಷದ ಅವಧಿಯಲ್ಲಿ ಅಧ್ಯಕ್ಷ ವಸಂತಕುಮಾರ್ ನೇತೃತ್ವದಲ್ಲಿ ಮಾಡಿದ ಸಮಾಜಮುಖಿ ಕಾರ್ಯಕ್ರಮಗಳನ್ನು ಶ್ಲಾಘಿಸಿದರು.

ಜಿಲ್ಲಾ ಘಟಕದ ಸಹಾಯಕ ಗವರ್ನರ್ ಎನ್. ಮಹೇಶ್ ಕುಮಾರ್ ಹಾಗೂ ತಾಲೂಕು ಘಟಕದ ರೋಟಾರಿಯನ್ ಪಿ.ಎಸ್. ಮೋಹನ್ ರಾಂ ಮಾತನಾಡಿ, ಪ್ರಸಕ್ತ ವರ್ಷದಲ್ಲಿ ರೋಟರಿ ಗಿಡ ನೆಡುವದು, ಸ್ವಚ್ಛತಾ ಆಂದೋಲನ ಹಾಗೂ ಸೋಲಾರ್ ಲ್ಯಾಂಪ್ ವಿತರಣೆ ಮಾಡುವ 3 ಮುಖ್ಯ ಕಾರ್ಯಗಳನ್ನು ಹಮ್ಮಿಕೊಂಡಿದೆ. ಶನಿವಾರಸಂತೆ ರೋಟರಿ ಕ್ಲಬ್ ಅಂಬೆಗಾಲಿಡುವ ಹಂತದಲ್ಲೇ ಅಪಾರ ಸಾಧನೆ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಕೃಷಿ ವಿಜ್ಞಾನಿ ಎ.ಡಿ. ಮೋಹನ್ ಕುಮಾರ್- ಪುಷ್ಪಾ ದಂಪತಿ ಹಾಗೂ ಕರಾಟೆ ಶಿಕ್ಷಕ ಎನ್.ಎಸ್. ಅರುಣ್ ಅವರನ್ನು ಸನ್ಮಾನಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಅಧ್ಯಕ್ಷ ಎಚ್.ಎಸ್. ವಸಂತ್ ಕುಮಾರ್ ಮಾತನಾಡಿದರು. ರೋಟರಿ ಕ್ಲಬ್ ಕಾರ್ಯದರ್ಶಿ ಎಸ್.ಎಸ್. ಸಾಗರ್, ಸದಸ್ಯರಾದ ಟಿ.ಆರ್. ಪುರುಷೋತ್ತಮ್, ವಿ.ಡಿ. ಮೋಹನ್ ಕುಮಾರ್, ಅರವಿಂದ್, ಎಸ್.ಎಸ್. ಚಿದಾನಂದ್, ಎಚ್.ಪಿ. ಮೋಹನ್, ಶ್ವೇತಾ, ಬೀನಾ, ಡಾ. ಉದಯಕುಮಾರ್, ಸೋಮವಾರಪೇಟೆ ರೋಟರಿ ಹಿಲ್ಸ್‍ನ ನಾಗೇಶ್, ಸದಾನಂದ್, ಡಾ. ಪ್ರಶಾಂತ್, ಎಚ್.ಟಿ. ಅನಿಲ್, ಜಯಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

ಸಮಾರಂಭಕ್ಕೆ ಮೊದಲು ಶನಿವಾರಸಂತೆಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತ ಹಾಗೂ ಬೆಳ್ಳಾರಳ್ಳಿ ತಿರುವು ರಸ್ತೆಯಲ್ಲಿ ಅಳವಡಿಸಿದ ನೂತನ ಮಾರ್ಗಸೂಚಿ ಫಲಕಗಳನ್ನು ರೋಟರಿ ಜಿಲ್ಲಾ ಗವರ್ನರ್ ಸುರೇಶ್ ಚಂಗಪ್ಪ ಉದ್ಘಾಟಿಸಿದರು.