ಸುಂಟಿಕೊಪ್ಪ, ಏ. 3: ಇಲ್ಲಿನ ಕಾಂಡನ ಕೊಲ್ಲಿ ಕಡಗದಾಳು ಗ್ರಾಮದ ಓ.ಯು. ಮಂದಣ್ಣ ಅವರ ಮನೆಯಲ್ಲಿ ಮನೆ ಕೆಲಸ ಮಾಡುತ್ತಿದ್ದ ಎರವ ಜನಾಂಗಕ್ಕೆ ಸೇರಿದ ಕಮಲ (ಪುಷ್ಪ) ಎಂಬಾಕೆ ಕಾಣೆಯಾಗಿರುವ ಬಗ್ಗೆ ಸುಂಟಿಕೊಪ್ಪ ಠಾಣೆಯಲ್ಲಿ ದೂರು ದಾಖಲಾಗಿದೆ. ಒಂದು ವರ್ಷದಿಂದ ಮಂದಣ್ಣ ಅವರ ಮನೆ ಕೆಲಸ ಮಾಡುತ್ತಿದ್ದು, ಕಪ್ಪು ಮೈ ಬಣ್ಣ, 5 ಅಡಿ ಎತ್ತರ, ಎರವ ಜನಾಂಗ ಕನ್ನಡ, ಕೊಡವ, ಎರವ, ಬಾಷೆ ಮಾತನಾಡುವ ಹಸಿರು ಬಣ್ಣದ ಚೂಡಿ ದಾರ, ಗುಲಾಬಿ ಬಣ್ಣದ ಪ್ಯಾಂಟ್ ದರಿಸಿದ್ದು, ಪತ್ತೆಯಾದಲ್ಲಿ ಸುಂಟಿಕೊಪ್ಪ ಠಾಣೆಗೆ ತಿಳಿಸುವಂತೆ ಕೋರಲಾಗಿದೆ.