ಕೂಡಿಗೆ, ಏ. 3: ಕೂಡ್ಲೂರು ಶ್ರೀ ದೊಡ್ಡಮ್ಮತಾಯಿ ಯುವಕ ಸಂಘ , ಮಿನಿಸ್ಟರ್ಸ್ ಕೋರ್ಟ್ ಸ್ಪೋಟ್ರ್ಸ್ ಕ್ಲಬ್, ನ್ಯೂ ಕಬಡ್ಡಿ ಫೆಡರೇಷನ್ ಆಫ್ ಇಂಡಿಯಾ, ಕರ್ನಾಟಕ ರಾಜ್ಯ ಕಬಡ್ಡಿ ಅಸೋಸಿಯೇಷನ್, ಕೊಡಗು ಜಿಲ್ಲಾ ಕಬಡ್ಡಿ ಅಸೋಸಿಯೇಷನ್ ಸಂಯುಕ್ತಾಶ್ರಯದಲ್ಲಿ ಕೂಡ್ಲೂರು ಸಿಎಸ್‍ಡಿ ಬಾಯ್ಸ್ ವತಿಯಿಂದ ಪ್ರಥಮ ವರ್ಷದ ಕೊಡಗು ಜಿಲ್ಲಾ ಚಾಂಪಿಯನ್ ಶಿಪ್-2018 ಮ್ಯಾಟ್ ಕಬಡ್ಡಿ ಪಂದ್ಯಾವಳಿಯು ಕೂಡ್ಲೂರು ಶಾಲಾ ಮೈದಾನದಲ್ಲಿ ನಡೆಯಿತು.

ಪಂದ್ಯಾವಳಿಗೆ ಕೂಡ್ಲೂರು ಬಸವೇಶ್ವರ ದೇವಾಲಯ ಸಮಿತಿಯ ಅಧ್ಯಕ್ಷ ಜವರೇಗೌಡ ಚಾಲನೆ ನೀಡಿದರು.

ಜಿಲ್ಲೆಯ 22 ತಂಡಗಳು ಭಾಗವಹಿಸಿದ್ದವು. ಕುಶಾಲನಗರ ಮಿನಿಸ್ಟರ್ಸ್ ಕೋರ್ಟ್‍ನ ತಂಡವು ಪ್ರಥಮ ಸ್ಥಾನ ಗಳಿಸಿ 24,444 ನಗದು ಹಾಗೂ ಟ್ರೋಫಿ, ಸತ್ಯ ಸ್ಫೋಟ್ರ್ಸ್ ಕ್ಲಬ್ ಸೋಮವಾರಪೇಟೆ ತಂಡ ದ್ವಿತೀಯ ಸ್ಥಾನ ಗಳಿಸಿ 12,222 ನಗದು ಹಾಗೂ ಟ್ರೋಫಿ, ಜೆಡ್‍ಎಕ್ಸ್ ಮಲ್ಕೋಡು ತೃತೀಯ ಸ್ಥಾನ ಹಾಗೂ ಚತುರ್ಥ ಸ್ಥಾನಗಳನ್ನು ಪಡೆದವು.

ವಿಜೇತ ತಂಡಗಳಿಗೆ ಬಹುಮಾನಗಳನ್ನು ಸ್ಥಳೀಯ ಲೋಕೋಪಯೋಗಿ ಇಲಾಖೆಯ ಗುತ್ತಿಗೆದಾರ ಪವನ್‍ಕುಮಾರ್ ವಿತರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ದೊಡ್ಡಮ್ಮತಾಯಿ ಯುವಕ ಸಂಘದ ಅಧ್ಯಕ್ಷ ಚೇತನ್ ವಹಿಸಿದ್ದರು.

ವೇದಿಕೆಯಲ್ಲಿ ಸಂಘದ ಕಾರ್ಯದರ್ಶಿ ಸುದೀಪ್, ಗ್ರಾಮದ ಮಾಜಿ ಕಾರ್ಯದರ್ಶಿ ರಾಜಾಚಾರಿ, ಕೂಡುಮಂಗಳೂರು ಸಹಕಾರ ಬ್ಯಾಂಕಿನ ನಿರ್ದೇಶಕ ಕೆ.ಕೆ.ಭೋಗಪ್ಪ, ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸದಸ್ಯ ಮಂಜುನಾಥ್, ಮುಳ್ಳುಸೋಗೆ ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ಎಂ.ಎಸ್.ರಾಜೇಶ್, ಹರೀಶ್, ಸಂಘದ ಖಜಾಂಚಿ ಸುಧೀರ್‍ಕುಮಾರ್ ಇದ್ದರು.