ಸೋಮವಾರಪೇಟೆ,ಏ.3: ಮಂಗಳೂರು ವಿಶ್ವವಿದ್ಯಾನಿಲಯದ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗ ಮತ್ತು ಭಾರತೀಯ ವಿಜ್ಞಾನ ಕಾಂಗ್ರೆಸ್ ವತಿಯಿಂದ ಮಂಗಳ ಸಭಾಂಗಣದಲ್ಲಿ ನಡೆದ 2 ದಿನಗಳ ರಾಷ್ಟ್ರೀಯ ಸಮ್ಮೇಳನದಲ್ಲಿ ಜಿಲ್ಲೆಯ ವಿದ್ಯಾರ್ಥಿನಿ ಎಸ್.ಶೃತಿ ಅತ್ಯುತ್ತಮ ಗೌರವ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

ಡಾ|| ರವಿಶಂಕರ್.ಟಿ.ಎನ್. ಮತ್ತು ಡಾ|| ಈಶ್ವರ ಭಟ್ ಮಾರ್ಗದರ್ಶನದಲ್ಲಿ ಭೌತಶಾಸ್ತ್ರ ಅಧ್ಯಯನ ವಿಭಾಗದ ವತಿಯಿಂದ ಏರ್ಪಡಿಸಲಾಗಿದ್ದ ಅಂತರÀರಾಷ್ಟ್ರೀಯ ಸಮ್ಮೇಳನದಲ್ಲಿ ‘ರೀಸೆಂಟ್ ಅಡ್ವಾನ್ಸಸ್ ಇನ್ ಮೆಟೀರಿಯಲ್ಸ್ ಸೈನ್ಸ್ ಅಂಡ್ ಬಯೋಫಿಜಿಕ್ಸ್” ನಲ್ಲಿ ವಿಚಾರ ಮಂಡಿಸಿ ಈಕೆ ವಿಶೇಷ ಪ್ರಶಸ್ತಿಯನ್ನು ಪಡೆದಿದ್ದಾರೆ.

ಮಂಗಳೂರಿನ ಕೊಣಾಜೆಯಲ್ಲಿ ಎಂ.ಎಸ್.ಸಿ. ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿರುವ ಈಕೆ ಇಲ್ಲಿನ ಮಹದೇಶ್ವರ ಬಡಾವಣೆಯ ಶಿವರಾಮ್ ಸಾಲಿಯಾನ್ ಮತ್ತು ಪುಷ್ಪ ದಂಪತಿಗಳ ಪುತ್ರಿ.