ಸುಂಟಿಕೊಪ್ಪ, ಏ. 3: ಕೆದಕಲ್ ಬಳಿ ಇನ್ನೋವಾ ಕಾರು ಹಾಗೂ ಮಾರುತಿ ಓಮ್ನಿ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಓಮ್ನಿ ಚಾಲಕನ ಕಾಲು ಮುರಿತಗೊಂಡಿದೆ.

ತಾ 3 ರ ಮಧ್ಯಾಹ್ನ 4 ಗಂಟೆ ಸಮಯದಲ್ಲಿ ಕೆದಕಲ್ ಸಮೀಪದ ಭದ್ರಕಾಳೇಶ್ವರಿ ದೇವಸ್ಥಾನ ಬಳಿಯ ತಿರುವಿನಲ್ಲಿ ಬೆಂಗಳೂರಿನಿಂದ ಪ್ರವಾಸಕ್ಕೆಂದು ಮಡಿಕೇರಿಗೆ ಬರುತ್ತಿದ್ದ ಇನ್ನೋವಾ ಕಾರು (ಕೆಎ 02-ಎಸಿ 3530) ಹಾಗೂ ಮಡಿಕೇರಿಯಿಂದ ಪಿರಿಯಾಪಟ್ಟಣಕ್ಕೆ ತೆರಳುತ್ತಿದ್ದ ಮಾರುತಿ ಓಮ್ನಿ ವ್ಯಾನ್ (ಕೆಎ19 ಎನ್ 5360) ವಾಹನಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಮಾರುತಿ ವ್ಯಾನ್ ಚಾಲಕ ಜಬ್ಬಿ ಎಂಬವರ ಕಾಲು ಮುರಿತಗೊಂಡಿದ್ದು, ಅವರನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ. ಇನ್ನೋವಾ ಚಾಲಕ ಮಾದೇವ, ಸಹ ಪ್ರಯಾಣಿಕರು ಮಾರುತಿ ಓಮ್ನಿಯಲ್ಲಿ ಪ್ರಯಾಣಿಸುತ್ತಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.