ಸೋಮವಾರಪೇಟೆ, ಏ. 3: ಇಲ್ಲಿನ ಕ್ಲಬ್‍ರಸ್ತೆಯಲ್ಲಿ ನಿರ್ಮಿಸಲಾಗಿರುವ ಜನಧ್ವನಿ ವೇದಿಕೆಯ ನೂತನ ಕಟ್ಟಡ ಉದ್ಘಾಟನಾ ಸಮಾರಂಭ ತಾ. 4ರಂದು (ಇಂದು) ಪೂರ್ವಾಹ್ನ 11 ಗಂಟೆಗೆ ನಡೆಯಲಿದೆ ಎಂದು ವೇದಿಕೆಯ ಅಧ್ಯಕ್ಷ ಸಿ.ಡಿ. ನೆಹರು ತಿಳಿಸಿದ್ದಾರೆ. ರಾಮ ಕಾಂಪ್ಲೆಕ್ಸ್‍ನ ಮಾಲೀಕ ವೀರಪ್ಪ ಅವರು ನೂತನ ಕಟ್ಟಡವನ್ನು ಉದ್ಘಾಟಿಸಲಿದ್ದು, ವಕೀಲರ ಸಂಘದ ಅಧ್ಯಕ್ಷ ಅಭಿಮನ್ಯುಕುಮಾರ್, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಸ್. ಮಹೇಶ್, ಪ.ಪಂ. ಮುಖ್ಯಾಧಿಕಾರಿ ನಾಚಪ್ಪ ಅವರುಗಳು ಭಾಗವಹಿಸಲಿದ್ದಾರೆ ಎಂದು ಸಿ.ಡಿ. ನೆಹರು ಮಾಹಿತಿ ನೀಡಿದ್ದಾರೆ.