ಮಡಿಕೇರಿ, ಏ. 2: ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ಮತ್ತು ಮಕ್ಕಳಿಗೆ ಒಂದೇ ಸೂರಿನಡಿ ವೈದ್ಯಕೀಯ ನೆರವು, ಪೊಲೀಸ್ ನೆರವು, ಆಪ್ತ ಸಮಾಲೋಚನೆ ಹಾಗೂ ಕಾನೂನು ಸೇವೆಯನ್ನು ಒದಗಿಸಲು ಗೆಳತಿ ವಿಶೇಷ ಚಿಕಿತ್ಸಾ ಘಟಕವನ್ನು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬೋಧಕ ಆಸ್ಪತ್ರೆ ಮಡಿಕೇರಿಯ ಕೊಠಡಿ ಸಂಖ್ಯೆ 26ರಲ್ಲಿ ಡಾ. ಅಬ್ದುಲ್ ಅಜೀಜ್, ಡಾ. ಶೈಲಜ, ಮಹಿಳಾ ಅಭಿವೃದ್ಧಿ ಅಧಿಕಾರಿ ಮಮ್ತಾಜ್ ಉಪಸ್ಥಿತಿಯಲ್ಲಿ ಅನಾವರಣ ಮಾಡಲಾಯಿತು.

ಘಟಕದ ರೀಮಾ ಕಾನೂನು ಸಲಹೆಗಾರರು, ಸೌಮ್ಯ ಬಿ.ಆರ್. ಮಹಿಳಾ ಪೊಲೀಸ್ ಅಧಿಕಾರಿ, ರಮ್ಯ ಕೆ.ಜಿ. ಆಪ್ತ ಸಮಾಲೋಚಕರು, ಕಾವೇರಮ್ಮ ಪಿ.ಎನ್. ಹಾಗೂ ಜಿತೇಂದ್ರ ಪಿ.ಬಿ. ಸಮಾಜ ಸೇವಕರು ಹಾಗೂ ಆಸ್ಪತ್ರೆಯ ಸಿಬ್ಬಂದಿ ಉಪಸ್ಥಿತರಿದ್ದರು.

ಈ ಘಟಕದ ಮುಖ್ಯ ಉದ್ದೇಶ ಲೈಂಗಿಕ ಮತ್ತು ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆ ಹಾಗೂ ಮಕ್ಕಳಿಗೆ ಕಾನೂನು ಮತ್ತು ಸಾಮಾಜಿಕ ಸ್ಥಿತಿಯನ್ನು ಗಣನೆಗೆ ತೆಗೆದುಕೊಳ್ಳದೆ ಒಂದೇ ರೀತಿಯ ಸೇವೆಯನ್ನು ನೀಡುವದು ಹಾಗೂ ಗುಣಾತ್ಮಕ ಚಿಕಿತ್ಸೆಯನ್ನು ನೀಡುವದರ ಮೂಲಕ ದ್ವಿತೀಯ ಹಿಂಸೆಯನ್ನು ಕಡಿಮೆ ಮಾಡುವದೇ ಗೆಳತಿ ವಿಶೇಷ ಚಿಕಿತ್ಸಾ ಘಟಕದ ಮುಖ್ಯ ಉದ್ದೇಶವೆಂದು ಮಹಿಳಾ ಅಭಿವೃದ್ಧಿ ಅಧಿಕಾರಿ ತಿಳಿಸಿದರು.