ಮಡಿಕೇರಿ, ಮಾ. 31: ಕೊಡಗು ಜಿಲ್ಲಾ ಬಿ.ಜೆ.ಪಿ. ಹಿಂದುಳಿದ ವರ್ಗಗಳ ಸಭೆ ಜಿಲ್ಲಾ ಅಧ್ಯಕ್ಷ ಬಿ.ವೈ. ಆನಂದ್ ರಘು ಅಧ್ಯಕ್ಷತೆಯಲ್ಲಿ ಭಾರತೀಯ ಜನತಾ ಪಕ್ಷದ ಕಚೇರಿಯಲ್ಲಿ ನಡೆಯಿತು.

ರಾಜ್ಯ ಹಿಂದುಳಿದ ವರ್ಗಗಳ ಪ್ರಧಾನ ಕಾರ್ಯದರ್ಶಿ ವರ್ತೂರು ಶ್ರೀಧರ್, ರಾಜ್ಯ ಪ್ರಮುಖರಾದ ಕೊಟ್ರೇಶಿ, ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಮಹೇಶ್ ಜೈನಿ, ರಾಬಿನ್ ದೇವಯ್ಯ, ಸತ್ಯಜಿತ್ ಸೂರತ್ಕಲ್, ಜಿಲ್ಲಾ ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಬಿ.ಬಿ. ಭಾರತೀಶ್, ಜಿಲ್ಲಾ ಕಾರ್ಯದರ್ಶಿ ದೇವರಾಜ್, ರಾಷ್ಟ್ರೀಯ ಸ್ವಯಂ ಸಂಘದ ಪ್ರಮುಖ ವೈಶಾಖ್ ಹಾಗೂ ಜಿಲ್ಲೆಯ ವಿವಿಧ ಭಾಗಗಳಿಂದ ಇತರ ಪ್ರಮುಖರು ಭಾಗವಹಿಸಿದ್ದರು.

ಮುಂದಿನ ಚುನಾವಣೆ ಮತ್ತು ಹಾವೇರಿಯಲ್ಲಿ ನಡೆಯಲಿರುವ ಸಮಾವೇಶದ ಕುರಿತು ಪೂರ್ವಭಾವಿ ತಯಾರಿ ಮತ್ತು ಚರ್ಚೆಗಳು ನಡೆಯಿತು. ಜಿಲ್ಲೆಯ ವಿವಿಧ ಭಾಗದಿಂದ ಸಭೆಗೆ ಆಗಮಿಸಿದ ಬಹುತೇಕ ಹಿಂದುಳಿದ ವರ್ಗದ ಪ್ರಮುಖರು ಸತ್ಯಜಿತ್ ಸೂರತ್ಕಲ್, ವೈಶಾಖ್ ಸೇರಿದಂತೆ ಇತರ ಪ್ರಮುಖರಲ್ಲಿ ವಿಧಾನಸಭಾ ಚುನಾವಣೆಗೆ ಪಕ್ಷದಿಂದ ನೂತನ ಅಭ್ಯರ್ಥಿಗಳನ್ನು ಸ್ಪರ್ಧಾ ಕಣಕ್ಕೆ ಇಳಿಸುವ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲೆಯ ಜನಾಭಿಪ್ರಾಯ ಮತ್ತು ಪಕ್ಷದ ಪ್ರಮುಖರ ಅಭಿಪ್ರಾಯವನ್ನು ಮೊದಲ ಹಂತದಲ್ಲಿ ಪಕ್ಷದ ವರಿಷ್ಠರಿಗೆ ರವಾನಿಸಲಾಗಿದೆ.

ಮುಂದಿನ ಕೆಲ ದಿನಗಳಲ್ಲಿ ಅಭ್ಯರ್ಥಿಯು ಯಾರೆಂಬದು ಅಂತಿಮಗೊಳ್ಳಲಿದೆ ಎಂದು ವೈಶಾಖ್ ಮತ್ತು ಸತ್ಯಜಿತ್ ಸೂರತ್ಕಲ್ ತಿಳಿಸಿದರು.