ವೀರಾಜಪೇಟೆ, ಮಾ. 31: ವೀರಾಜಪೇಟೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಕಿ ಟ್ರಸ್ಟ್ ಇವರ ವತಿಯಿಂದ 24ನೆ ವರ್ಷದ ಹಾಕಿ ತರಬೇತಿ ಶಿಬಿರವು ತಾ. 4ರಿಂದ 20ರವರೆಗೆ ವಿರಾಜಪೇಟೆಯ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಬೆಳಿಗ್ಗೆ 7ಗಂಟೆಯಿಂದ 9ಗಂಟೆಯವರೆಗೆ ನಡೆಯಲಿದೆ. ಆಸಕ್ತ ಬಾಲಕ ಬಾಲಕಿಯರು ಈ ಶಿಬಿರವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಟ್ರಸ್ಟ್‍ನ ಅಧ್ಯಕ್ಷ ಡಾ. ಎಂ.ಸಿ ಕಾರ್ಯಪ್ಪನವರು ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗಾಗಿ ಕಾರ್ಯದರ್ಶೀ ಸಂಪಿ ಪೂಣಚ್ಚ ಮೊ.9482246390 ಸಂಪರ್ಕಿಸಬಹುದು.