ಸೋಮವಾರಪೇಟೆ,ಮಾ.31: ಕೊಡಗಿನ ಹೆಮ್ಮೆಯ ಜನರಲ್ ಕೊಡಂದೇರ ಸುಬ್ಬಯ್ಯ ತಿಮ್ಮಯ್ಯ ಅವರ ಜನ್ಮದಿನವನ್ನು ಇಲ್ಲಿನ ಜೈಜವಾನ್ ಮಾಜಿ ಸೈನಿಕರ ಸಂಘದಿಂದ ಆಚರಿಸಲಾಯಿತು.
ಸಂಘದ ಕಚೇರಿಯಲ್ಲಿ ಜನರಲ್ ತಿಮ್ಮಯ್ಯ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಮಾಜಿ ಸೈನಿಕರು, ಧೀರ ಸೇನಾನಿಯ ಸೈನಿಕ ಸೇವೆಯನ್ನು ಸ್ಮರಿಸಿದರು.
ಈ ಸಂದರ್ಭ ಮಾತನಾಡಿದ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಈರಪ್ಪ ಅವರು, ಜನರಲ್ ತಿಮ್ಮಯ್ಯ ಅವರ ಸೈನಿಕ ಶಿಸ್ತು, ದೇಶಪ್ರೇಮ, ಕರ್ತವ್ಯ ನಿಷ್ಠೆ ಹಾಗೂ ಪ್ರಾಮಾಣಿಕತೆಯನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು. ದೇಶಕ್ಕೆ ಒದಗಿದ ಕ್ಲಿಷ್ಟ ಸಂದರ್ಭದಲ್ಲೂ ಶತ್ರುಗಳಿಂದ ದೇಶವನ್ನು ರಕ್ಷಿಸಲು ತೋರಿದ ಅಪ್ರತಿಮ ಸಾಹಸ, ಚಾಣಾಕ್ಷತನದ ನಡೆಗಳು ಇಂದಿಗೂ ಸೈನ್ಯಕ್ಕೆ ಅನುಕರಣೀಯ ಎಂದರು.
ಈ ಸಂದರ್ಭ ಸಂಘದ ಕಾರ್ಯದರ್ಶಿ ಬಸಪ್ಪ, ಖಜಾಂಚಿ ಸುಕುಮಾರ್, ಪದಾಧಿಕಾರಿಗಳಾದ ಶಿವಪ್ಪ, ತಮ್ಮಯ್ಯ, ಲಿಂಗಪ್ಪ, ಪೂವಯ್ಯ, ವೀರಪ್ಪ, ರಾಮಚಂದ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು.ಸೋಮವಾರಪೇಟೆ,ಮಾ.31: ಕೊಡಗಿನ ಹೆಮ್ಮೆಯ ಜನರಲ್ ಕೊಡಂದೇರ ಸುಬ್ಬಯ್ಯ ತಿಮ್ಮಯ್ಯ ಅವರ ಜನ್ಮದಿನವನ್ನು ಇಲ್ಲಿನ ಜೈಜವಾನ್ ಮಾಜಿ ಸೈನಿಕರ ಸಂಘದಿಂದ ಆಚರಿಸಲಾಯಿತು.
ಸಂಘದ ಕಚೇರಿಯಲ್ಲಿ ಜನರಲ್ ತಿಮ್ಮಯ್ಯ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಮಾಜಿ ಸೈನಿಕರು, ಧೀರ ಸೇನಾನಿಯ ಸೈನಿಕ ಸೇವೆಯನ್ನು ಸ್ಮರಿಸಿದರು.
ಈ ಸಂದರ್ಭ ಮಾತನಾಡಿದ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಈರಪ್ಪ ಅವರು, ಜನರಲ್ ತಿಮ್ಮಯ್ಯ ಅವರ ಸೈನಿಕ ಶಿಸ್ತು, ದೇಶಪ್ರೇಮ, ಕರ್ತವ್ಯ ನಿಷ್ಠೆ ಹಾಗೂ ಪ್ರಾಮಾಣಿಕತೆಯನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು. ದೇಶಕ್ಕೆ ಒದಗಿದ ಕ್ಲಿಷ್ಟ ಸಂದರ್ಭದಲ್ಲೂ ಶತ್ರುಗಳಿಂದ ದೇಶವನ್ನು ರಕ್ಷಿಸಲು ತೋರಿದ ಅಪ್ರತಿಮ ಸಾಹಸ, ಚಾಣಾಕ್ಷತನದ ನಡೆಗಳು ಇಂದಿಗೂ ಸೈನ್ಯಕ್ಕೆ ಅನುಕರಣೀಯ ಎಂದರು.
ಈ ಸಂದರ್ಭ ಸಂಘದ ಕಾರ್ಯದರ್ಶಿ ಬಸಪ್ಪ, ಖಜಾಂಚಿ ಸುಕುಮಾರ್, ಪದಾಧಿಕಾರಿಗಳಾದ ಶಿವಪ್ಪ, ತಮ್ಮಯ್ಯ, ಲಿಂಗಪ್ಪ, ಪೂವಯ್ಯ, ವೀರಪ್ಪ, ರಾಮಚಂದ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು.