ಕರಿಕೆ, ಮಾ. 31: ಇಲ್ಲಿಗೆ ಸಮೀಪದ ಹಳೆಮನೆ ಎಂಬಲ್ಲಿ ಭಾಗಮಂಡಲ ಕರಿಕೆ ಅಂತರ್ ರಾಜ್ಯ ಹೆದ್ದಾರಿಯ ಕೂಗಳತೆ ದೂರದ ನದಿಯಲ್ಲಿ ಅಪರಿಚಿತ ಗಂಡಸಿನ ಮೃತದೇಹ ಪತ್ತೆಯಾಗಿದ್ದು, ಕಪ್ಪುಬಣ್ಣದ ಪ್ಯಾಂಟ್ ಹಾಗೂ ಕಪ್ಪು ಬಿಳಿ ಗೆರೆ ಹೊಂದಿರುವ ತುಂಬು ತೋಳಿನ ಅಂಗಿ ಧರಿಸಿದ್ದು, ಮೃತನ ಜೇಬಿನಲ್ಲಿ ಯಾವದೆ ಗುರುತಿನ ಚೀಟಿ,ಮೊಬೈಲ್,ದಾಖಲಾತಿಗಳು ಕಂಡುಬಂದಿರುವದಿಲ್ಲ.

ಭಾಗಮಂಡಲ ಪೋಲಿಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ಹೊರತೆಗೆದು ಸುಳ್ಯ ಕೆ.ವಿ.ಜಿ. ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದ್ದಾರೆ. ಇದೀಗ ಚುನಾವಣಾ ಸಮಯವಾಗಿದ್ದು ಇದು ಯಾರೋ ದುಷ್ಕರ್ಮಿಗಳು ಕೊಲೆಮಾಡಿ ನದಿಗೆ ಎಸೆದಿರುವ ಶಂಕೆಯನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದು ಪೊಲೀಸ್ ತನಿಖೆಯಿಂದಷ್ಟೆ ಸತ್ಯಾಂಶ ಹೊರಬೀಳಬೇಕಿದೆ.

-ಸುಧೀರ್ ಹೊದ್ದೆಟ್ಟಿ