ಭಾಗಮಂಡಲ, ಮಾ. 31: ಕೆದಂಬಾಡಿ ಕ್ರಿಕೆಟ್ ಕಪ್ ಆಶ್ರಯದಲ್ಲಿ ಚೆಟ್ಟಿಮಾನಿಯ ಕೆದಂಬಾಡಿ ಆಟದ ಮೈದಾನದಲ್ಲಿ ಗೌಡ ಕುಟುಂಬಗಳ ನಡುವೆ ನಡೆಯುತ್ತಿರುವ ಕ್ರಿಕೆಟ್ ಉತ್ಸವದಲ್ಲಿ ಉಳುವಾರನ ಹಾಗೂ ನಿಡ್ಯಮಲೆ, ಕುದುಪಜೆ ತಂಡಗಳು ಮುಂದಿನ ಹಂತ ಪ್ರವೇಶಿಸಿವೆ.

ಇಂದು ನಡೆದ ಪಂದ್ಯದಲ್ಲಿ ಕುದುಪಜೆ ತಂಡ ಪನೇಡ್ಕ ತಂಡವನ್ನು ಸೋಲಿಸಿದರೆ, ಬಂದಡ್ಕ ತಂಡ ಪೊನ್ನೆಟ್ಟಿ ತಂಡದ ವಿರುದ್ಧ ಜಯ ಸಾಧಿಸಿತು. ಉಳುವಾರನ ತಂಡದ ವಿರುದ್ಧ ಹುಲಿಮನೆ ತಂಡ ಸೋಲು ಅನುಭವಿಸಿತು. ಕುದುಪಜೆ ತಂಡ ಬಂದಡ್ಕ ತಂಡದ ವಿರುದ್ಧ ಗೆಲುವು ಸಾಧಿಸಿತು. ಬಿದ್ರುಪಣೆ ತಂಡ ಬಾಳಾಡಿ ತಂಡವನ್ನು ಮಣಿಸಿತು. ಕುಯ್ಯಮುಡಿ ತಂಡ ನಿಡ್ಯಮಲೆ ವಿರುದ್ಧ ಸೋಲು ಕಂಡಿತು.

ಕುಡೆಕಲ್ ತಂಡ ಕುದುಕುಳಿ ತಂಡದ ವಿರುದ್ಧ ಪರಾಭವಗೊಂಡಿತು. ಬಿದ್ರುಪಣೆ ತಂಡ ಉಳುವಾರನ ತಂಡದ ವಿರುದ್ಧ ಸೋಲು ಕಂಡಿತು. ನಿಡ್ಯಮಲೆ ತಂಡ ಕುದುಕುಳಿ ತಂಡದ ವಿರುದ್ಧ ಜಯ ಸಾಧಿಸಿತು.