ಪೂಳೆಮಾಡು ದೇವಸ್ಥಾನದಲ್ಲಿ ಪೂಜೆ

ಮಡಿಕೇರಿ: ಪೊನ್ನಂಪೇಟೆ-ಬೇಗೂರಿನ ಪೂಳೆಮಾಡು ಈಶ್ವರ ದೇವಸ್ಥಾನದಲ್ಲಿ ತಾ. 29 ರಿಂದ ವಿಶೇಷ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆಯುತ್ತಿದೆ. ಉತ್ಸವದ ವಿಶೇಷವಾಗಿ ಏ. 1 ರಂದು ಮಧ್ಯಾಹ್ನ 2 ಗಂಟೆಗೆ ಹರದಾಸ ಅಪ್ಪಚ್ಚಕವಿಯ 150ನೇ ಜನ್ಮೋತ್ಸವ ಸಂದರ್ಭ ಅಡ್ಡಂಡ ಕಾರ್ಯಪ್ಪ ನೇತೃತ್ವದಲ್ಲಿ ‘ಅಮರ ಕಾವ್ಯ’ ಎಂಬ ಕವಿ ಗಾಯನ ಕಾರ್ಯಕ್ರಮ ನಡೆಯಲಿದೆ ಎಂದು ದೇವಸ್ಥಾನ ಸಮಿತಿಯ ಅಧ್ಯಕ್ಷ ಬೊಳಿಯಂಗಡ ದಾದು ಪೂವಯ್ಯ ತಿಳಿಸಿದ್ದಾರೆ. ಉತ್ಸವದ ಪ್ರತಿ ದಿನ ಭಕ್ತಾದಿಗಳಿಂದ ಬೊಳಕ್ ಪೂಜೆ ನಡೆಯಲಿದೆ.

ಭಗವತಿ ವಾರ್ಷಿಕೋತ್ಸವ

ನಾಪೋಕ್ಲು: ಬಲ್ಲಮಾವಟಿ ಗ್ರಾಮದ ಭಗವತಿ ದೇವಾಲಯದ ವಾರ್ಷಿಕ ಉತ್ಸವದಲ್ಲಿ ದೇವರ ನೃತ್ಯಬಲಿ ಜರುಗಿತು. ವಾರ್ಷಿಕ ಉತ್ಸವದಲ್ಲಿ ಭಕ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.

ಮತ್ತೂರು ಶ್ರೀ ಭೂತನಾಥ ಅಯ್ಯಪ್ಪ ಉತ್ಸವ

ಪೊನ್ನಂಪೇಟೆ: ಮತ್ತೂರು ಗ್ರಾಮದಲ್ಲಿರುವ ಶ್ರೀ ಭೂತನಾಥ ಅಯ್ಯಪ್ಪ ದೇವಸ್ಥಾನದ ವಾರ್ಷಿಕ ಹಬ್ಬ ತಾ. 30 ರಂದು ಆರಂಭಗೊಂಡಿದ್ದು, ಏ. 3 ರಂದು ಬೆಳಿಗ್ಗೆ 8 ಗಂಟೆಯಿಂದ 12 ಗಂಟೆಯವರೆಗೆ ಪೂಜಾ ಕಾರ್ಯಕ್ರಮ, ಅಪರಾಹ್ನ 4.35 ಕ್ಕೆ ದೇವರು ಹೊರಬರುವದು, ಭಂಡಾರ ಸೇರಿದಂತೆ ವಿವಿಧ ಪೂಜಾ ಕಾರ್ಯಗಳು ನಡೆಯಲಿವೆ.