ಸಿಎಂ ಸಿದ್ದರಾಮಯ್ಯ ಗೌಪ್ಯ ಸಭೆ
ಚಾಮರಾಜನಗರ, ಮಾ. 30: ಗುಂಡ್ಲುಪೇಟೆ ತಾಲೂಕಿನ ಸೆರಾಯ್ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಮಧ್ಯಾಹ್ನದವರೆಗೆ ತಮ್ಮ ಕೆಲವು ಆಪ್ತರ ಜತೆ ಗೌಪ್ಯ ಚರ್ಚೆ ನಡೆಸಿದ್ದಾರೆ. ಪುತ್ರ ಡಾ. ಯತೀಂದ್ರ, ಸಚಿವ ಡಾ. ಹೆಚ್.ಸಿ. ಮಹದೇವಪ್ಪ, ಶಾಸಕ ವೆಂಕಟೇಶ್, ಮುಖಂಡರಾದ ಮರೀಗೌಡ, ಚೆನ್ನಾರೆಡ್ಡಿ, ನಂಜಪ್ಪ ಅವರು ಮೊದಲ ಹಂತದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದಾರೆ. ಚುನಾವಣೆಯಲ್ಲಿ ವರುಣಾ ಹಾಗೂ ಚಾಮುಂಡೇಶ್ವರಿ ಕ್ಷೇತ್ರದ ಗೆಲುವು ಕುರಿತು ತಂತ್ರಗಾರಿಕೆ ರೂಪಿಸುವದು ಸಭೆಯ ಉದ್ದೇಶ ಎಂದು ಮೂಲಗಳು ತಿಳಿಸಿವೆ. ಸಿದ್ದರಾಮಯ್ಯ ಇರುವ ಮೂರು ಕೊಠಡಿಗಳಿಗೆ ಸೇವೆ ಒದಗಿಸುವ ಸಿಬ್ಬಂದಿಯ ಮೊಬೈಲ್ ಫೆÇೀನ್ಗಳನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ಬಂದ ಹಲವು ಸ್ಥಳೀಯ ಮುಖಂಡರಿಗೆ ರೆಸಾರ್ಟ್ ಪ್ರವೇಶಕ್ಕೆ ಅನುಮತಿ ನೀಡಿಲ್ಲ. ಶಾಸಕರಾದ ಭೈರತಿ ಬಸವರಾಜ್ ಹಾಗೂ ಪುಟ್ಟರಂಗಶೆಟ್ಟಿ ಅವರನ್ನೂ ಭದ್ರತಾ ಸಿಬ್ಬಂದಿ ತಡೆದರು. ಕೆಲಕಾಲದ ನಂತರ ಅವರನ್ನು ರೆಸಾರ್ಟ್ ಒಳಗೆ ಬಿಡಲಾಯಿತು.
ನೌಕರರ ನಿವೃತ್ತಿ ವಯಸ್ಸು 62 ಕ್ಕೆ ಏರಿಕೆ
ಭೋಪಾಲ್, ಮಾ. 30: ಇನ್ನೇನು ಕೆಲವೇ ದಿನಗಳಲ್ಲಿ ನಿವೃತ್ತರಾಗಲಿರೋ ಮಧ್ಯ ಪ್ರದೇಶ ಸರ್ಕಾರಿ ನೌಕರರಿಗೊಂದು ಗುಡ್ ನ್ಯೂಸ್. ರಾಜ್ಯ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 60 ರಿಂದ 62ಕ್ಕೆ ಹೆಚ್ಚಿಸಲಾಗುವದು ಎಂದು ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಅವರು ಶುಕ್ರವಾರ ಘೋಷಿಸಿದ್ದಾರೆ. ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಚೌವ್ಹಾಣ್ ಅವರು, ಬಡ್ತಿಯಲ್ಲಿ ಮೀಸಲಾತಿ ಇರುವದರಿಂದ ಸಾಮಾನ್ಯ ವರ್ಗದ ನೌಕರರು ಬಡ್ತಿಯಿಂದ ವಂಚಿತರಾಗುತ್ತಿದ್ದಾರೆ. ಹಿರಿತನದ ಆಧಾರದ ಮೇಲೆ ಬಡ್ತಿ ಪಡೆಯುವದು ಎಲ್ಲಾ ನೌಕರರ ಹಕ್ಕು. ಇದನ್ನು ಗಮನದಲ್ಲಿಟ್ಟುಕೊಂಡು ನಿವೃತ್ತಿ ವಯಸ್ಸನ್ನು ಹೆಚ್ಚಿಸಲಾಗಿದೆ ಎಂದು ಹೇಳಿದ್ದಾರೆ. ಸಾಮಾನ್ಯ ವರ್ಗದು ನೌಕರರು ಬಡ್ತಿ ಪಡೆಯದೆ ನಿವೃತ್ತಿಯಾದ ಹಲವು ಪ್ರಕರಣಗಳಿವೆ ಎಂದು ಸಿಎಂ ತಿಳಿಸಿದ್ದಾರೆ.
ಏ. 25 ರಂದು ಸಿಬಿಎಸ್ಇ ಮರು ಪರೀಕ್ಷೆ
ನವದೆಹಲಿ, ಮಾ. 30: ಸಿಬಿಎಸ್ಇ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆ 10ನೇ ತರಗತಿಯ ಗಣಿತ ಹಾಗೂ 12ನೇ ತರಗತಿಯ ಅರ್ಥಶಾಸ್ತ್ರಕ್ಕೆ ಮರು ಪರೀಕ್ಷೆ ದಿನಾಂಕವನ್ನು ಶಿಕ್ಷಣ ಇಲಾಖೆ ಘೋಷಿಸಿದೆ. ತಾ. 30 ರಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಶಿಕ್ಷಣ ಇಲಾಖೆ ಕಾರ್ಯದರ್ಶಿ ಅನಿಲ್ ಸ್ವರೂಪ್, 12ನೇ ತರಗತಿಯ ಅರ್ಥಶಾಸ್ತ್ರಕ್ಕೆ ಏ. 25 ರಂದು ಮರು ಪರೀಕ್ಷೆ ನಡೆಸಲಾಗುವದು ಎಂದು ತಿಳಿಸಿದ್ದಾರೆ. ಇದೇ ವೇಳೆ 10ನೇ ತರಗತಿ ಗಣಿತ ಶಾಸ್ತ್ರದ ಮರು ಪರೀಕ್ಷೆಯ ಬಗ್ಗೆಯೂ ಶಿಕ್ಷಣ ಇಲಾಖೆ ಕಾರ್ಯದರ್ಶಿ ಮಾಹಿತಿ ನೀಡಿದ್ದು, 10ನೇ ತರಗತಿಯ ಮರು ಪರೀಕ್ಷೆ ದೆಹಲಿ ಮತ್ತು ಹರ್ಯಾಣ ರಾಜ್ಯಗಳಲ್ಲಿ ಮಾತ್ರ ನಡೆಯಲಿದೆ ಎಂದು ತಿಳಿಸಿದ್ದಾರೆ. 10ನೇ ತರಗತಿಯ ಮರುಪರೀಕ್ಷೆ ಬಗ್ಗೆ ಇನ್ನು 15 ದಿನಗಳಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವದು, 10ನೇ ತರಗತಿಯ ಮರುಪರೀಕ್ಷೆ ಜುಲೈನಲ್ಲಿ ನಡೆಯುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಪ್ರಶ್ನೆ ಪತ್ರಿಕೆ ಸೋರಿಕೆ : 6 ವಿದ್ಯಾರ್ಥಿಗಳ ಬಂಧನ
ರಾಂಚಿ, ಮಾ. 30: ಕೇಂದ್ರಿಯ ಪ್ರೌಢ ಶಿಕ್ಷಣ ಮಂಡಳಿ ಸಿಬಿಎಸ್ ಇ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಆರು ಮಂದಿ ವಿದ್ಯಾರ್ಥಿಗಳನ್ನು ಜಾರ್ಖಂಡ್ ಪೆÇಲೀಸರು ಇಂದು ಬಂಧಿಸಿದ್ದಾರೆ. ಛಾತ್ರಾ ಸಾದರ್ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೆÇಲೀಸರು ಖಾಸಗಿ ಕೋಚಿಂಗ್ ಸೆಂಟರ್ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಸೇರಿದಂತೆ 30 ಮಂದಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ವೇಳೆ 12ಕ್ಕೂ ಹೆಚ್ಚು ಮೊಬೈಲ್ ಪೆÇೀನ್ಗಳನ್ನು ಪೆÇಲೀಸರು ವಶಪಡಿಸಿಕೊಂಡಿದ್ದಾರೆ. 12ನೇ ತರಗತಿಯ ಅರ್ಥಶಾಸ್ತ್ರ ಹಾಗೂ 10ನೇ ತರಗತಿಯ ಗಣಿತಶಾಸ್ತ್ರದ ವಿಷಯದ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಎಸ್ಇ ಈ ಪ್ರಾಧ್ಯಾಪಕರ ವಿರುದ್ಧ ಆರೋಪ ಮಾಡಿತ್ತು
ಬೆಳಗಾವಿ ಕೇಂದ್ರಾಡಳಿತ ಪ್ರದೇಶ:ಶಿವಸೇನೆ ಆಗ್ರಹ
ಬೆಳಗಾವಿ, ಮಾ. 30: ಬೆಳಗಾವಿ ಗಡಿ ವಿವಾದವನ್ನು ಬಗೆಹರಿಸದಿದ್ದರೆ ಹಿಂಸಾಚಾರದ ಹಾದಿ ಹಿಡಿಯಬೇಕಾಗುತ್ತದೆ ಎಂದು ಶಿವಸೇನಾ ಮುಖಂಡ ಸಂಜಯ್ ರೌತ್ ಅವರು ಶುಕ್ರವಾರ ಬೆದರಿಕೆ ಹಾಕಿದ್ದಾರೆ. ಕರ್ನಾಟಕ ಸರ್ಕಾರದ ಹಸ್ತಕ್ಷೇಪದಿಂದಾಗಿ ಬೆಳಗಾವಿ ಜನತೆಗೆ ಅನ್ಯಾಯವಾಗುತ್ತಿದೆ. ಹೀಗಾಗಿ ಬೆಳಗಾವಿ ಮತ್ತು ಇತರ ಗಡಿ ಪ್ರದೇಶವನ್ನು ಕೇಂದ್ರಾಡಳಿತ ಪ್ರದೇಶ ಎಂದು ಘೋಷಣೆ ಮಾಡುವದರಿಂದ ಗಡಿ ವಿವಾದವನ್ನು ಇತ್ಯರ್ಥಗೊಳಿಸಬಹುದು ಎಂದು ಶಿವಸೇನಾ ಮುಖಂಡ ಹೇಳಿದ್ದಾರೆ. ಬೆಳಗಾವಿ ಜನರಿಗೆ ಅಥವಾ ಅಲ್ಲಿನ ಗಡಿ ಪ್ರದೇಶಕ್ಕೆ ಯಾವದೇ ರೀತಿಯ ಅನ್ಯಾಯವಾದರೂ ಅದು ಇಡೀ ಮಹಾರಾಷ್ಟ್ರದ ಮೇಲೆ ಪರಿಣಾಮ ಬೀರುತ್ತದೆ. ಕಾಶ್ಮೀರ, ಕಾವೇರಿ, ಸಟ್ಲೇಜ್ ಅಥವಾ ಬೆಳಗಾವಿ ವಿವಾದಗಳು ಪ್ರಜಾಪ್ರಭುತ್ವದಿಂದ ಪರಿಹಾರವಾಗಿಲ್ಲ ಎಂದರೆ ನಾವು ಹಿಂಸೆಯ ಹಾದಿ ಹಿಡಿಯುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕಾವೇರಿ ವಿವಾದ:ಎಐಎಡಿಎಂಕೆ ಉಪವಾಸ ಸತ್ಯಾಗ್ರಹ
ಮಧುರೈ, ಮಾ. 30: ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡುವಲ್ಲಿ ವಿಫಲವಾಗಿರುವ ಕೇಂದ್ರ ಸರ್ಕಾರದ ವಿರುದ್ಧ ತಮಿಳುನಾಡು ಸರ್ಕಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಒತ್ತಾಯಿಸಿ ಆಡಳಿತರೂಢ ಎಐಎಡಿಎಂಕೆ ಏಪ್ರಿಲ್ 2 ರಂದು ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಿದೆ. ಅಲ್ಲದೆ ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಅವರು ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸುವ ಸುಳಿವು ನೀಡಿದ್ದಾರೆ. ವರದಿಗಳ ಪ್ರಕಾರ, ತಮಿಳುನಾಡು ಸರ್ಕಾರ ನಾಳೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಿದೆ. ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಒತ್ತಾಯಿಸಿ ಎಐಎಡಿಎಂಕೆ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಏಪ್ರಿಲ್ 2 ರಂದು ಒಂದು ದಿನ ಉಪವಾಸ ಸತ್ಯಾಗ್ರಹ ನಡೆಸಲಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಎಐಎಡಿಎಂಕೆ ಸಂಚಾಲಕ ಒ. ಪನ್ನೀರ್ ಸೇಲ್ವಂ ಅವರು ಹೇಳಿದ್ದಾರೆ.
ಕೇರಳದ ನಾಲ್ವರು ಐಸಿಸ್ ಉಗ್ರರ ಸಾವು
ಕೋಝಿಕೋಡು, ಮಾ. 30: ಅಫ್ಘಾನಿಸ್ತಾನದಲ್ಲಿ ಇಸಿಸ್ ಉಗ್ರರು ಪ್ರಾಬಲ್ಯ ಹೊಂದಿರುವ ಪ್ರದೇಶದಲ್ಲಿ ಅಮೇರಿಕಾ ನಡೆಸಿದ ಡ್ರೋನ್ ಧಾಳಿಯಲ್ಲಿ ಒಬ್ಬ ಬಾಲಕ ಸೇರಿದಂತೆ ಕೇರಳದ ನಾಲ್ವರು ಐಸಿಸ್ ಉಗ್ರರು ಸಾವನ್ನಪ್ಪಿದ್ದಾರೆ. ನಾಲ್ವರು ಮಲಯಾಳಿಗಳ ಸಾವಿನ ಬಗ್ಗೆ ಅನಧಿಕೃತ ಮೂಲಗಳಿಂದ ಮಾಹಿತಿ ಪಡೆಯಲಾಗಿದೆ. ಮಾಹಿತಿಯನ್ನು ಪರಿಶೀಲಿಸಲಾಗುತ್ತಿದೆ ಎಂದು ಕೇರಳ ಪೆÇಲೀಸ್ ವರಿಷ್ಠಾಧಿಕಾರಿ ಲೋಕನಾಥ್ ಬೆಹೆರಾ ತಿಳಿಸಿದ್ದಾರೆ. ವರದಿ ಪ್ರಕಾರ ಪದ್ನಾ ನಿವಾಸಿಗಳಾದ ಶಿಹಾಸ್, ಆತನ ಪತ್ನಿ ಅಜ್ಮಲಾ, ಅವರ ಮಗು ಮತ್ತು ತ್ರಿಕಾರಿಪುರ್ ನಿವಾಸಿ ಮೊಹಮ್ಮದ್ ಮಾಂಸದ್ ಮೃತಪಟ್ಟಿದ್ದಾರೆ. ಅಜ್ಮಲ್ ಗರ್ಭಿಣಿಯಾಗಿದ್ದು, ಕೇರಳದಿಂದ ಇವರೆಲ್ಲಾ ನಾಪತ್ತೆಯಾಗಿದ್ದರು ಎಂಬದು ತಿಳಿದು ಬಂದಿದೆ. ಅಬ್ದುಲ್ಲಾ ರಶೀದ್ ನೇತೃತ್ವದಲ್ಲಿನ ಮಲೆಯಾಳಿ ಗುಂಪು 2016ರಲ್ಲಿ ಐಸಿಸ್ ಸೇರಲು ಕಾಸರಗೋಡುವಿನಿಂದ ಸಿರಿಯಾಕ್ಕೆ ತೆರಳಿತ್ತು.
ಇಬ್ಬರು ಆರೋಪಿ ಯೋಧರ ಬಂಧನ
ಬೆಂಗಳೂರು, ಮಾ. 30: ಸೈನಿಕ ಪಂಕಜ್ (26) ಹತ್ಯೆ ಪ್ರಕರಣದಲ್ಲಿ ಭಾಗಿಗಳಾಗಿದ್ದ ಇಬ್ಬರು ಯೋಧರನ್ನು ಬೆಂಗಳೂರು ಪೆÇಲೀಸರು ಬಂಧಿಸಿದ್ದಾರೆ. ಆಂಧ್ರ ಪ್ರದೇಶದವರಾದ ಮುರಳಿಕೃಷ್ಣ ಹಾಗೂ ಧನರಾಜ್ ಆರೋಪಿಗಳಾಗಿದ್ದು ಇವರೂ ಸಹ ಯೋಧರಾಗಿದ್ದರು. ಉತ್ತರ ಪ್ರದೇಶ ಮೂಲದ ಪಂಕಜ್ ಮೂರು ದಿನಗಳ ಹಿಂದೆ ವಿವೇಕನಗರದ ಎಎಸ್ಸಿ ಸೆಂಟರ್ ಮತ್ತು ಕಾಲೇಜು ಆವರಣದಲ್ಲಿ ಕೊಲೆಯಾಗಿದ್ದ. ಪಂಕಜ್ ತನ್ನ ಕೋಣೆಯಲ್ಲಿ ಮಲಗಿರುವ ವೇಳೆ ಹಗ್ಗದಿಂದ ಕತ್ತನ್ನು ಬಿಗಿದ ಆರೋಪಿಗಳು ಬಳಿಕ ಚಾಕುವಿನಿಂದ ಕುತ್ತಿಗೆ ಸೀಳಿದ್ದಾರೆ. ಆ ವೇಳೆ ಪಂಕಜ್ ಸಹ ಸಾಕಷ್ಟು ಪ್ರತಿರೋಧ ತೋರಿದ್ದಾನೆ. ಧನರಾಜ್ ಕಾಲು ಕೈಗಳಿಗೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಹೀಗೆ ಪಂಕಜ್ ಹತ್ಯೆ ಮಾಡಿದ್ದ ಆರೋಪಿಗಳು ಮೃತದೇಹವನ್ನು ಆರ್ಮಿ ಟ್ರಕ್ನಲ್ಲಿ ತೆಗೆದುಕೊಂಡು ಹೋಗಿ ನಿರ್ಜನ ಪ್ರದೇಶದಲ್ಲಿ ಸುಟ್ಟು ಹಾಕಿ ಏನೂ ತಿಳಿಯದವರಂತೆ ಮರಳಿದ್ದರೆಂದು ಪೆÇಲೀಸ್ ಡಿಸಿಪಿ ಚಂದ್ರಗುಪ್ತ ತಿಳಿಸಿದ್ದಾರೆ.