ಸೋಮವಾರಪೇಟೆ,ಮಾ.30: ಕೊಡಗು ಜಿಲ್ಲಾ ನ್ಯೂ ಕಬಡ್ಡಿ ಅಸೋಸಿಯೇಶನ್ ಆಶ್ರಯದಲ್ಲಿ ಪ್ರಥಮ ವರ್ಷದ ಕೊಡಗು ಜಿಲ್ಲಾ ಕಬಡ್ಡಿ ಚಾಂಪಿಯನ್ ಶಿಪ್ ಪಂದ್ಯಾಟ ಏ. 1ರಂದು ಕೂಡ್ಲೂರು ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಅಸೋಸಿಯೇಶನ್‍ನ ಕಾರ್ಯದರ್ಶಿ ಕೆ.ಬಿ. ಸತೀಶ್ ತಿಳಿಸಿದ್ದಾರೆ.
ಕೂಡ್ಲೂರಿನ ದೊಡ್ಡಮ್ಮತಾಯಿ ಯುವಕ ಸಂಘ, ಹೋಟೆಲ್ ಮಿನಿಸ್ಟರ್ ಕೋರ್ಟ್ ಹಾಗೂ ಕೂಡ್ಲೂರಿನ ಸಿಎಸ್‍ಟಿ ಬಾಯ್ಸ್ ಇವರುಗಳ ಸಹಭಾಗಿತ್ವದೊಂದಿಗೆ ಪಂದ್ಯಾಟ ನಡೆಯಲಿದ್ದು, ಜಿಲ್ಲೆಯ ಆಸಕ್ತ ಕಬಡ್ಡಿ ತಂಡಗಳು ಮೊ.ಸಂ. 8762817896ನ್ನು ಸಂಪರ್ಕಿಸಬಹುದೆಂದು ತಿಳಿಸಿದ್ದಾರೆ.