ಶನಿವಾರಸಂತೆ, ಮಾ. 30: ಜೆಡಿಎಸ್ ಶಾಸಕಾಂಗ ನಾಯಕ ಎಚ್.ಡಿ.ರೇವಣ್ಣ ಅವರಿಗೆ ಶುಕ್ರವಾರ ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಜೆಡಿಎಸ್ ಶನಿವಾರಸಂತೆ ಹೋಬಳಿ ಕಾರ್ಯಕರ್ತರು ಹೂವಿನ ಮಾಲೆ ಸಮರ್ಪಿಸಿ ಸ್ವಾಗತ ನೀಡಿದರು.ನೆರೆಯ ಹಾಸನ ಜಿಲ್ಲೆಯ ಗಡಿಭಾಗ (ಮೊದಲ ಪುಟದಿಂದ) ಸಮೀಪದ ಚಂಗಡಹಳ್ಳಿಯಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಸಂದರ್ಭ ಶನಿವಾರಸಂತೆಗೆ ಆಗಮಿಸಿದಾಗನೂರಾರು ಕಾರ್ಯಕರ್ತರು ಬೈಕ್ ಜಾಥಾ ನಡೆಸಿ ಸ್ವಾಗತ ಕೋರಿದರು.ಕಾರಿನಿಂದ ಇಳಿದ ರೇವಣ್ಣ ಕಾರ್ಯಕರ್ತರನ್ನು ಉದ್ದೇಶಿಸಿ ಕಾರ್ಯಕರ್ತರು ಸಂಘಟಿತರಾಗಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಬಿ.ಎ. ಜೀವಿಜಯ ಅವರ ಗೆಲುವಿಗೆ ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು.ಬಳಿಕ ಅವರು ಕಾರ್ಯಕರ್ತರ ಬೈಕ್ ಜಾಥಾದೊಂದಿಗೆ ಚಂಗಡಹಳ್ಳಿಗೆ ತೆರಳಿದರು. ಈ ಸಂದರ್ಭ ಜೆಡಿಎಸ್ ಹೋಬಳಿ ಘಟಕದ ಅಧ್ಯಕ್ಷ ಆದಿಲ್ ಪಾಶ, ಜಿಲ್ಲಾ ಮುಖಂಡರಾದ ಡಿ.ಪಿ. ಬೋಜಪ್ಪ, ಎನ್.ಕೆ. ಅಪ್ಪಸ್ವಾಮಿ, ಚೆನ್ನಬಸಪ್ಪ, ಮುತ್ತೇಗೌಡ, ಮತ್ತೂರ್ ಮಹೇಶ್, ಆನಂದ್, ನಾಝಿಮ್ ಪಾಶ, ವಿವೇಕ್, ದಿನೇಶ್ ಮತ್ತಿತರರು ಹಾಜರಿದ್ದರು.