ಮಡಿಕೇರಿ, ಮಾ. 30: ಕಳೆದ ವರ್ಷ ಜುಲೈನಿಂದ ಇದುವರೆಗೆ ತನ್ನ ಪತಿ ಊರಿಗೆ ಹೋಗಿ ಬರುವದಾಗಿ ತಿಳಿಸಿದ್ದು, ಈ ತನಕ ಹಿಂತಿರುಗಿ ಬಂದಿಲ್ಲವೆಂದು ವಿಜಯ ಎಂಬವರ ಪತ್ನಿ ಜಯಮ್ಮ ನಗರಠಾಣೆಯಲ್ಲಿ ಪುಕಾರು ಸಲ್ಲಿಸಿದ್ದಾರೆ. ಚಾಮರಾಜನಗರ ಮೂಲದ ಈ ವ್ಯಕ್ತಿಯ ಸುಳಿವು ಲಭಿಸಿದರೆ, ನಗರ ಪೊಲೀಸ್ ಠಾಣೆಗೆ 08272- 229333 ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.