ಸುಂಟಿಕೊಪ್ಪ, ಮಾ. 30: ಐಗೂರು ಗ್ರಾಮದಲ್ಲಿ ಏಕೈಕ ವಿಜಯ ಬ್ಯಾಂಕ್ ಶಾಖೆ ಕಳೆದ 40 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ. ಈಗ ಕಾಫಿ, ಕರಿಮೆಣಸು ಕೊಯ್ಲು ನಡುವೆ ಕಳೆದ 1 ವಾರದಿಂದ ವಿಜಯ ಬ್ಯಾಂಕಿನ ಎಟಿಎಂನಿಂದ ಗ್ರಾಹಕರಿಗೆ ನಗದು ಲಭ್ಯವಾಗುತ್ತಿಲ್ಲ. ಗ್ರಾಹಕರು ಬ್ಯಾಂಕ್ ಬಾಗಿಲಿನ ದರ್ಶನ ಭಾಗ್ಯ ಪಡೆದು ಪರಿತಪಿಸುತ್ತಾ ವಾಪಾಸು ಬರುವಂತಾಗಿದೆ. ಬ್ಯಾಂಕ್ ವ್ಯವಸ್ಥಾಪಕರಲ್ಲಿ ವಿಚಾರಿಸಿದರೆ ಬ್ಯಾಂಕ್‍ಗೆ ಹಣ ಬಂದಿಲ್ಲ ಎಂಬ ಉತ್ತರ ನೀಡುತ್ತಾರೆ. ಎಂದು ಗ್ರಾಹಕರು ಅಳಲು ತೋಡಿಕೊಂಡಿದ್ದಾರೆ.