ಗೋಣಿಕೊಪ್ಪ ವರದಿ, ಮಾ. 30: ಇಲ್ಲಿನ ಕಾವೇರಿ ಕಾಲೇಜು ರಾಷ್ಟ್ರೀಯ ಸೇವಾ ಯೋಜನಾ ಘಟಕ ಮತ್ತು ಕಾವೇರಿ ಎಜುಕೇಷನ್ ಸೊಸೈಟಿ ವತಿಯಿಂದ ಸುವರ್ಣ ಮಹೋತ್ಸವದ ಪ್ರಯುಕ್ತ ಕಾವೇರಿ ಸಾಂತ್ವನ ಯೋಜನೆ ಅನುಷ್ಠಾನ ಮತ್ತು ಎನ್.ಎಸ್.ಎಸ್ ಸಮಾರೋಪ ಸಮಾರಂಭ ಮಾರ್ಚ್ 31 ರಂದು ನಡೆಯಲಿದೆ.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ಸಾಂತ್ವನ ಯೋಜನೆಯನ್ನು ಉದ್ಘಾಟಿಸಲಿದ್ದಾರೆ. ರಾಜ್ಯ ಅಧೀನ ಕಾರ್ಯದರ್ಶಿ ಗಣನಾಥ ಶೆಟ್ಟಿ ಎಕ್ಕಾರು ಸಮಾರೋಪ ಭಾಷಣ ನೆರವೇರಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾವೇರಿ ಎಜುಕೇಷನ್ ಸೊಸೈಟಿ ಅಧ್ಯಕ್ಷ ಎ.ಸಿ. ಗಣಪತಿ ವಹಿಸಲಿದ್ದಾರೆ. ಇತರರು ಪಾಲ್ಗೊಳ್ಳಲಿದ್ದಾರೆ.