ಸಿದ್ದಾಪುರ, ಮಾ. 30: ಕೊಂಡಂಗೇರಿಯಲ್ಲಿ ಹಾಲುಗುಂದ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ದೀಪಾ ಅವರನ್ನು ನಿಂದಿಸಿದ್ದಲ್ಲದೆ, ಹಲ್ಲೆಗೆ ಯತ್ನಿಸಿ ಬೆದರಿಕೆ ಹಾಕಿರುವ ಪ್ರಕರಣ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ 20ಕ್ಕೂ ಅಧಿಕ ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಪಿ.ಡಿ.ಓ. ದೀಪಾ ನೀಡಿರುವ ಪುಕಾರು ಮೇರೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕೊಂಡಂಗೇರಿ ಉರೂಸ್ ಸಮಾರಂಭದ ಭಿತ್ತಿಪತ್ರ ತೆರವು ಸಂಬಂಧ ಅಹಿತಕರ ಘಟನೆ ನಡೆದಿದ್ದನ್ನು ಇಲ್ಲಿ ಸ್ಮರಿಸಬಹುದು. ಚುನಾವಣಾ ಸಂಹಿತೆ ಹಿನ್ನೆಲೆ ಬ್ಯಾನರ್- ಭಿತ್ತಿಪತ್ರ ತೆರವುಗೊಳಿಸುವ ವೇಳೆ ಘಟನೆ ಸಂಭವಿಸಿತ್ತು