ಸಿದ್ದಾಪುರ, ಮಾ.29: ಕೊಂಡಂಗೇರಿ ಗ್ರಾಮದಲ್ಲಿ ಹಾಲುಗುಂದ ಗ್ರಾ.ಪಂ ಪಿ.ಡಿ.ಓ ಹಾಗೂ ಸಿಬ್ಬಂದಿ ಚುನಾವಣೆ ನೀತಿಸಂಹಿತೆ ಹಿನ್ನೆಲೆಯಲ್ಲಿ ಬ್ಯಾನರ್ ತೆರವುಗೊಳಿಸುವ ಸಂದರ್ಭ ಗ್ರಾ.ಪಂ. ಸಿಬ್ಬಂದಿ ಮಂಜುನಾಥ್ ಮೇಲೆ ಕಲ್ಲುತೂರಾಟ ನಡೆಸಿ ಗಾಯಗೊಳಿಸಿದ್ದ ಘಟನೆಗೆ ಸಂಬಂಧಿಸಿದಂತೆ ಮೂವರ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.
ಕೊಂಡಂಗೇರಿಯಲ್ಲಿ ಬ್ಯಾನರ್ ತೆರವುಗೊಳಿಸುವ ಸಂದರ್ಭ ಸ್ಥಳೀಯರು ಹಾಗೂ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ ನಡೆದು ಬಳಿಕ ಕಲ್ಲುತೂರಾಟ ನಡೆದಿತ್ತು. ಈ ವೇಳೆ ಮಾರಣಾಂತಿಕ ಹಲ್ಲೆ ನಡೆಸಿರುವದಾಗಿ ಹಲ್ಲೆಗೊಳಗಾದ ಮಂಜುನಾಥ್ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಹಿನ್ನೆಲೆಯಲ್ಲಿ ಕೊಂಡಂಗೇರಿಯ ನಿವಾಸಿ ಹನೀಫ, ಹಂಸ, ಅಲೀಜು ಎಂಬವರ ಮೇಲೆ ಕರ್ತವ್ಯಕ್ಕೆ ಅಡ್ಡಿ ಪ್ರಕರಣ ದಾಖಲಿಸಲಾಗಿದೆ.