ಮೂರ್ನಾಡು, ಮಾ. 28: ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಪ್ರಾಥಮಿಕ, ಮಾಧ್ಯಮಿಕ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ಮಡಿಕೇರಿ ತಾಲೂಕು ಅಧ್ಯಕ್ಷರಾಗಿ ಹೆಚ್.ಬಿ. ಕೃಷ್ಣಪ್ಪ ಆಯ್ಕೆಗೊಂಡಿದ್ದಾರೆ.
ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಪ್ರಾಥಮಿಕ, ಮಾಧ್ಯಮಿಕ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷರಾದ ಬಿ.ಸಿ. ರಾಜು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೇಮಕ ಮಾಡಲಾಯಿತು. ತಾಲೂಕು ಸಂಘದ ಉಪಾಧ್ಯಕ್ಷರಾಗಿ ಹೆಚ್.ಎಲ್. ಭೈರ ಹಾಗೂ ಜಿ. ಮಂಜುನಾಥ್, ಕಾರ್ಯದರ್ಶಿ ಹೆಚ್.ವಿ. ಶಶಿಕಲಾ, ಸಹಕಾರ್ಯದರ್ಶಿ ಸಿ. ಮಣಿಕಂಠ, ಖಜಾಂಚಿ ಬಿ. ಸರ್ವಮಂಗಳ, &divound;ರ್ದೇಶಕರಾಗಿ ಪಿ. ಮಾದೇಶ, ನಟೇಶ, ರವೀಂದ್ರನಾಥ್ ಅವರುಗಳನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ &divound;ರ್ದೇಶಕಿ ಜಯಮ್ಮ, ಜಿಲ್ಲಾ ಕಾರ್ಯದರ್ಶಿ ಹೆಚ್.ಕೆ. ಕುಮಾರ್, ಸಹಕಾರ್ಯದರ್ಶಿ ಸುರೇಂದ್ರ ಹಾಜರಿದ್ದರು.