ಮಡಿಕೇರಿ, ಮಾ. 28: ಮಡಿಕೇರಿ 66/11 ಕೆ.ವಿ. ವಿದ್ಯುತ್ ಉಪ-ಕೇಂದ್ರದಿಂದ ಹೊರಹೋಗುವ ರಾಜಾಸೀಟ್ ಫೀಡರ್ನಲ್ಲಿ ತುರ್ತು ನಿರ್ವಹಣೆ ಹಾಗೂ ದುರಸ್ತಿ ಕಾರ್ಯವನ್ನು ನಿರ್ವಹಿಸಬೇಕಾಗುವದರಿಂದ ತಾ. 31ರಂದು ಬೆಳಿಗ್ಗೆ 10ರಿಂದ ಸಂಜೆ 5ಗಂಟೆವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವದು. ರಾಜಾಸೀಟ್, ಹೊಸಬಡಾವಣೆ, ಇಂದಿರಾನಗರ, ಚಾಮುಡೇಶ್ವರಿನಗರ ಡೈರಿ ಫಾರಂ, ವಿದ್ಯಾನಗರ. ಸುಬ್ರಹ್ಮಣ್ಯ ನಗರ, ಸುತ್ತಮುತ್ತ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಇಲಾಖೆ ಕೋರಿದೆ.