ಮಡಿಕೇರಿ, ಮಾ. 28: ಮಡಿಕೇರಿಯ ವಾಂಡರರ್ಸ್ ಸ್ಪೋಟ್ರ್ಸ್ ಕ್ಲಬ್ ಮತ್ತು ಮ್ಯಾನ್ಸ್ ಹಾಕಿ ಅಕಾಡೆಮಿ ಇವರ ಸಹಯೋಗದಲ್ಲಿ ವರ್ಷಂಪ್ರತಿ ನಡೆಸುವ ಉಚಿತ ಬೇಸಿಗೆ ತರಬೇತಿ ಶಿಬಿರ ತಾ. 30 ರಿಂದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆರಂಭವಾಗಿದೆ. (ಜಿಲ್ಲಾ ಕ್ರೀಡಾಂಗಣ) ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ಯೋಗ, ಹಾಕಿ ಮತ್ತು ಅಥ್ಲೆಟಿಕ್ಸ್ ಕ್ರೀಡೆಗಳಿಗೆ ನುರಿತ ತರಬೇತುದಾರರಿಂದ ಪ್ರತಿ ದಿನ ಬೆಳಿಗ್ಗೆ 6.30 ರಿಂದ 8.30 ರವರೆಗೆ ತರಬೇತಿ ನೀಡಲಾಗುವದು. ತರಬೇತಿಯು ಸುಮಾರು 1 ತಿಂಗಳ ಕಾಲ ನಡೆಯಲಿರುವದು. ಶಿಬಿರದಲ್ಲಿ ಚಾರಣ ಕೂಡ ಏರ್ಪಡಿಸಲಾಗುವದು. ಆಸಕ್ತರು ತಾ. 30 ರಂದು ಬೆಳಿಗ್ಗೆ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ತಮ್ಮ ಹೆಸರನ್ನು ನೇರವಾಗಿ ನೋಂದಾಯಿಸಬಹುದು. ಶಿಬಿರಾರ್ಥಿಗಳು ಕ್ರೀಡಾ ಸಾಮಗ್ರಿಗಳನ್ನು ತಾವೇ ತರತಕ್ಕದ್ದು.
ಏ. 1 ರಂದು ವಾಂಡರರ್ಸ್ ಸ್ಪೋಟ್ರ್ಸ್ ಕ್ಲಬ್‍ನ ಅಧ್ಯಕ್ಷರಾಗಿದ್ದ ಮತ್ತು ಕೊಡಗಿನ ದ್ರೋಣಾಚಾರ್ಯರೆಂದೇ ಹೆಸರುಗಳಿಸಿದ್ದ ದಿ. ಶಂಕರ ಸ್ವಾಮಿ ಅವರ ಜನ್ಮ ದಿನಾಂಕವಾಗಿದ್ದು, ಅಂದು ಅಧಿಕೃತವಾಗಿ ಶಿಬಿರದ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕ್ರೀಡಾಸಕ್ತರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಸಂಸ್ಥೆ ಕೋರಿದೆ.
ಹೆಚ್ಚಿನ ವಿವರಗಳಿಗೆ ಬಾಬು ಸೋಮಯ್ಯ - 9448895950, ವೆಂಕಟೇಶ್ - 9448873999, ಕಿಶನ್ ಪೂವಯ್ಯ - 9448899554, ಚುಮ್ಮಿ ದೇವಯ್ಯ - 9448899567 ಇವರುಗಳನ್ನು ಸಂಪರ್ಕಿಸಬಹುದೆಂದು ಕ್ಲಬ್‍ನ ಪದಾಧಿಕಾರಿ ಬಾಳೆಯಡ ಕಿಶನ್ ಪೂವಯ್ಯ ಕೋರಿದ್ದಾರೆ.