ಮಡಿಕೇರಿ, ಮಾ. 28: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕೊಡಗು ಪ್ರೆಸ್ ಕ್ಲಬ್ ಇವರ ಆಶ್ರಯದಲ್ಲಿ ರಾಜಾಸೀಟು ಉದ್ಯಾನ ವನದಲ್ಲಿ ಯುಗಾದಿ ಕವಿಗೋಷ್ಠಿ ಕಾರ್ಯಕ್ರಮ ತಾ. 30 ರಂದು ಮಧ್ಯಾಹ್ನ 2.30ಕ್ಕೆ ನಡೆಯಲಿದೆ.

ಕವಿಗೋಷ್ಠಿಯನ್ನು ಸಾಹಿತಿ ಹಾಗೂ ಬಿಎಸ್‍ಎನ್‍ಎಲ್ ಉಪ ಮಂಡಳಾಧಿಕಾರಿ ಕೊಟ್ಟಕೇರಿಯನ ಲೀಲಾದಯಾನಂದ ಅವರು ಉದ್ಘಾಟಿಸಲಿದ್ದಾರೆ.

ಹಿರಿಯ ಸಾಹಿತಿ ಮಂಡೇಪಂಡ ಗೀತಾಮಂದಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕವಿಗೋಷ್ಠಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎಸ್. ಲೋಕೇಶ್‍ಸಾಗರ್ ಪ್ರಾಸ್ತಾವಿಕವಾಗಿ ಮಾತನಾಡಲಿದ್ದು, ಕೊಡಗು ಪ್ರೆಸ್ ಕ್ಲಬ್‍ನ ಅಧ್ಯಕ್ಷ ಅಜ್ಜಮಾಡ ರಮೇಶ್‍ಕುಟ್ಟಪ್ಪ ಆಶಯ ನುಡಿಗಳನ್ನಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಮಡಿಕೇರಿ ತಾಲೂಕು ಕಸಾಪ ಅಧ್ಯಕ್ಷ ಕುಡೆಕಲ್ ಸಂತೋಷ್, ಮಾಜಿ ಅಧ್ಯಕ್ಷ ಮುನೀರ್ ಅಹಮದ್, ಸಾಹಿತಿಗಳಾದ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ, ಚಾಲ್ರ್ಸ್ ಡಿಸೋಜ, ಪ್ರೆಸ್‍ಕ್ಲಬ್ ಖಜಾಂಚಿ ರೆಜಿತ್‍ಕುಮಾರ್, ಹಾಗೂ ವಿಶೇಷ ಆಹ್ವಾನಿತರಾಗಿ ವಿಕ್ರಂ ಡೆಕೊರೇಟರ್ಸ್‍ನ ಪಿ.ಜಿ. ಕಮಲ್ ಮತ್ತು ಪಿ.ಜಿ. ಸುಕುಮಾರ್ ಅವರು ಆಗಮಿಸಲಿದ್ದಾರೆ.

ಈ ಸಂದರ್ಭದಲ್ಲಿ ಕವಿಗಳಾದ ಕಿಗ್ಗಾಲು ಗಿರೀಶ್, ನ.ಲ. ವಿಜಯ, ಪಿ. ವೈಲೇಶ್, ಜಲಾಕಾಳಪ್ಪ, ಕಸ್ತೂರಿಗೋವಿಂದಮ್ಮಯ್ಯ, ಶ.ಗ. ನಯನತಾರ, ಬೈತಡ್ಕ ಜಾನಕಿ, ಮಣಜೂರು ಶಿವಕುಮಾರ್, ನಳಿನಿಬಿಂದು, ಕಡ್ಲೇರ ಜಯಲಕ್ಷ್ಮಿ ಮೋಹನ್, ರಮ್ಯ ಮೂರ್ನಾಡು, ಸುಕುಮಾರ್ ತೊರೆನೂರು, ಕಡ್ಲೇರ ತುಳಸಿ ಮೋಹನ್, ಅಲ್ಲಾರಂಡ ವಿಠಲ, ಎಸ್.ಡಿ. ಡಿಸೋಜ, ಚಮ್ಮಟ್ಟೀರ ಪ್ರವೀಣ್, ಜಗದೀಶ್ ಜೋಡುಬೀಟಿ, ಡಾ. ಕೆ.ಸಿ, ದಯಾನಂದ್, ಓಂಶ್ರೀ, ಕೆ.ವಿ. ಪುಟ್ಟಣ್ಣಚಾರ್ಯ, ಉದಯಕುಮಾರ್ ಬಸವನತ್ತೂರು, ಮಹೇಂದ್ರ, ಆರ್.ಜಯನಾಯಕ್, ಭಾಗೀರಥಿ ಹುಲಿತಾಳ, ಎಸ್.ಕೆ. ಈಶ್ವರಿ, ಬಸವರಾಜಪ್ಪ ಹೆಚ್.ಸಿ. ಜಯಲಕ್ಷ್ಮಿ ನೆಲ್ಯಹುದಿಕೇರಿ, ಅಶ್ವಿನಿ ಕೃಷ್ಣಕಾಂತ್, ದೀಪಿಕಾ ಸುದರ್ಶನ್, ಎಸ್.ಎಂ. ಆಶಾ, ಅನಿತಾ ಸುಧಾಕರ್, ವಸಂತಿ ರವೀಂದ್ರ, ಎಂ.ಎ. ರುಬೀನ, ಸುನೀತ ಪ್ರೀತು, ಶೈಲಜಾ ದಿನೇಶ್, ಎಲ್.ಎಂ. ಪ್ರೇಮ, ಮಹೇಂದ್ರ, ಗೀತಪದ್ಮನಾಭ, ಪುಷ್ಪಲತಾಶಿವಪ್ಪ, ಚೈತ್ರ, ಆನಂದ್‍ಕೊಡಗು, ಕಿಶೋರ್‍ಕುಮಾರ್ ಕತ್ತಲೆಕಾಡು, ಕೆ.ಸಿ. ಸುದರ್ಶನ್, ಟೋಮಿ ಥೋಮಸ್, ಎಂ.ಎ. ಅಜೀಜ್, ಶಶಿಕಿರಣ್, ಬೈಲೇರ ಬಾನುಅಶೋಕ್, ಎಂ.ಬಿ. ಕಿಶೋರ್‍ಕುಮಾರ್, ಎಂ.ಯು. ಶ್ರಾವಣಿ, ಕೃತಜ್ಞ ಬೆಸೂರ್, ತನ್ಮಯ, ಅಕ್ಷಯ್ ಚಿನ್ಮಯ, ಸೈಮನ್ ಸೇರಿದಂತೆ 40ಕ್ಕೂ ಅಧಿಕ ಕವಿಗಳು ಕವನ ವಾಚಿಸಲಿದ್ದಾರೆ.