ವೀರಾಜಪೇಟೆ, ಮಾ. 28: ವೀರಾಜಪೇಟೆ ಆರ್ಜಿ ಗ್ರಾಮ ಪಂಚಾಯಿತಿಯು ಕೆಲವು ವರ್ಷಗಳಿಂದ ಸಾರ್ವಜನಿಕವಾಗಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದು ಇದು ಇನ್ನು ಮುಂದುವರೆಯಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ತಿಳಿಸಿದರು.

ಆರ್ಜಿ ಗ್ರಾಮ ಪಂಚಾಯಿತಿಯ ರೂ. 30 ಲಕ್ಷ ವೆಚ್ಚದ ನೂತನ ಕಟ್ಟಡಕ್ಕೆ ತಾ. 24 ರಂದು ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದ ಅವರು, ಕಟ್ಟಡ ನಿರ್ಮಾಣಕ್ಕಾಗಿ ಜಾಗದ ಅವಶ್ಯಕತೆ ಎದುರಾಗಿತ್ತು. ಸ್ಥಳೀಯರಾದ ಉಮರ್ ಕುಟ್ಟಿ ರಾಜ್ಯ ಹೆದ್ದಾರಿ ಒತ್ತಿನ 7 ಸೆಂಟ್, ಜಾಗವನ್ನು ಉದಾರವಾಗಿ ನೀಡಿ ಸಹಕರಿಸಿರುವದರಿಂದ ಉಮ್ಮರ್ ಪಂಚಾಯಿತಿಯ ಸೂರಿಗೆ ಜಾಗ ನೀಡಿದಂತಾಗಿದೆ. ಅವರ ಈ ದಾನದ ಗುಣವು ಎಲ್ಲರಿಗೂ ಬರುವಂತಾಗಬೇಕು ಎಂದು ಹೇಳಿದರು. ಈ ಸಂದರ್ಭ ಗ್ರಾಮ ಪಂಚಾಯತಿ ಅಧ್ಯಕ್ಷೆ ಗಾಯತ್ರಿ ರವಿ, ಉಪಾಧ್ಯಕ್ಷ ಬಿ.ಎಮ್. ರಮೇಶ್, ಸದಸ್ಯರಾದ ಪಾರ್ವತಿ, ಉದಯಕುಮಾರ್, ಲವಕುಮಾರ್, ಪಂಚಾಯತಿ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಪ್ರಮುಖರು ಭಾಗವಹಿಸಿದ್ದರು.