ಮಡಿಕೇರಿ, ಮಾ. 28: ಸೌಹಾರ್ದ ಕೊಡಗು ಸಂಘಟನೆಯ ವತಿಯಿಂದ ಹರದಾಸ ಅಪ್ಪಚ್ಚ ಕವಿ -150 ರ ನೆನಪು ಕಾರ್ಯಕ್ರಮ ತಾ. 29 ರಂದು (ಇಂದು) ಪೂರ್ವಾಹ್ನ 10.30 ಕ್ಕೆ ಮಡಿಕೇರಿಯ ಬಾಲಭವನದಲ್ಲಿ ನಡೆಯಲಿದೆ ಎಂದು ಸಂಘಟನೆಯ ಮಡಿಕೇರಿ ಸಂಚಾಲಕ ಬೇಬಿ ಮ್ಯಾಥ್ಯು ತಿಳಿಸಿದ್ದಾರೆ.

ಸಭೆಯ ಅಧ್ಯಕ್ಷತೆಯನ್ನು ಸೌಹಾರ್ದ ಕೊಡಗು ಸಂಸ್ಥೆಯ ಪ್ರಧಾನ ಸಂಚಾಲಕ ಡಾ. ಇ.ರ. ದುರ್ಗಾ ಪ್ರಸಾದ್ ವಹಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪಿ.ಕೆ. ಪೊನ್ನಪ್ಪ ನೆರವೇರಿಸಲಿದ್ದಾರೆ. ಮುಖ್ಯ ಭಾಷಣಕಾರರಾಗಿ ಹಿರಿಯ ಸಾಹಿತಿ ಕೆ.ಪಿ. ಬಾಲಸುಬ್ರಮಣ್ಯ ಮಾತನಾಡಲಿದ್ದಾರೆ.