ಮಡಿಕೇರಿ, ಮಾ. 28: ಮಡಿಕೇರಿ ಕೊಡವ ಸಮಾಜ ಪೊಮ್ಮಕ್ಕಡ ಒಕ್ಕೂಟದ ಪ್ರಥಮ ವಾರ್ಷಿಕೋತ್ಸವ ಹಾಗೂ ಸಂತೋಷ ಕೂಟ ಕಾರ್ಯಕ್ರಮ ತಾ. 30 ರಂದು (ನಾಳೆ) ನಗರದ ಕೊಡವ ಸಮಾಜದಲ್ಲಿ ನಡೆಯಲಿದೆ.

ಈ ಪ್ರಯುಕ್ತ ಬೆಳಿಗ್ಗೆ 9 ಗಂಟೆಯಿಂದ ವಿವಿಧ ಕಾರ್ಯಕ್ರಮ ಗಳು ಆರಂಭಗೊಳ್ಳಲಿದ್ದು, ಅಪರಾಹ್ನ 12 ಗಂಟೆಗೆ ಸಭಾಕಾರ್ಯಕ್ರಮ ಜರುಗಲಿದೆ.

ಬೆಳಿಗ್ಗೆಯಿಂದ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಲಿದ್ದು, ಸಭಾ ಕಾರ್ಯಕ್ರಮದ ಬಳಿಕ ಅಪರಾಹ್ನ ಕೊಡವ ಹಾಡು ಸ್ಪರ್ಧೆ ಸೇರಿದಂತೆ ಮತ್ತಿತರ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿದೆ. ಸಭಾ ಕಾರ್ಯಕ್ರಮದಲ್ಲಿ ಹಲವರಿಗೆ ಸನ್ಮಾನ ಸೇರಿದಂತೆ 2016-17ನೇ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ, ಪಿಯುಸಿ, ಡಿಪ್ಲೊಮ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಸಾಧನೆ ಮಾಡಿದವರವನ್ನು ಪುರಷ್ಕರಿಸ ಲಾಗುವದು ಎಂದು ಕೂಟದ ಅಧ್ಯಕ್ಷೆ ಕನ್ನಂಡ ಕವಿತಾ ಬೊಳ್ಳಪ್ಪ ಅವರು ತಿಳಿಸಿದ್ದಾರೆ.