ಸುಂಟಿಕೊಪ್ಪ, ಮಾ. 28: ಇಲ್ಲಿನ ಪಂಪ್ ಹೌಸ್ ಅಂಗನವಾಡಿ ಸಮೀಪ ರಸ್ತೆ ಬದಿಯಲ್ಲಿ ರಾತ್ರಿ ನಿಲ್ಲಿಸಿದ್ದ ಟಾಟಾ ಆರ್ಯ ಕಾರಿಗೆ ಕಿಡಿಗೇಡಿಗಳು ಕಲ್ಲು ಹೊಡೆದು ಕಾರಿನ ಗಾಜು ಪುಡಿ ಗೈದಿರುವ ಘಟನೆ ನಡೆದಿದೆ.

ಸುಂಟಿಕೊಪ್ಪ ಪಂಪ್ ಹೌಸ್ ರಸ್ತೆ ನಿವಾಸಿ ಬಿಜು ಕುಮಾರ್ ಅವರಿಗೆ ಸೇರಿದ ಟಾಟಾ ಆರ್ಯ ಕಾರನ್ನು ಅಂಗನವಾಡಿ ಕೇಂದ್ರದ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದು ಕಿಡಿಗೇಡಿಗಳು ಕಾರಿಗೆ ಕಲ್ಲು ಹೊಡೆದ ಪರಿಣಾಮ ಕಾರಿನ ಗಾಜು ಒಡೆದು ನಷ್ಟ ಸಂಬವಿಸಿದೆ. ಈ ಬಗ್ಗೆ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಬಿಜು ಕುಮಾರ್ ದೂರು ನೀಡಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.