ಗೋಣಿಕೊಪ್ಪ ವರದಿ, ಮಾ. 28: ಶ್ರೀಮಂತಿಕೆ ಮತ್ತು ಅಧಿಕಾರ ಸಮಾಜದಲ್ಲಿ ಹೆಚ್ಚು ಮಹತ್ವ ಪಡೆದುಕೊಳ್ಳುತ್ತಿರುವದರಿಂದ ಸಾಮಾಜಿಕ ಮೌಲ್ಯ ಕುಸಿಯುತ್ತಿದೆ ಎಂದು ನಿವೃತ್ತ ಲೋಕಾಯುಕ್ತ ಎನ್. ಸಂತೋಷ್ ಹೆಗ್ಡೆ ಆತಂಕ ವ್ಯಕ್ತಪಡಿಸಿದರು.ಗೋಣಿಕೊಪ್ಪ ಕಾವೇರಿ ಕಾಲೇಜು ಆವರಣದಲ್ಲಿ ಕಾವೇರಿ ಎಜುಕೇಶನ್ ಸೊಸೈಟಿಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿ, ಸಮಾಜದಲ್ಲಿ ಅನ್ಯಾಯ ನಡೆಯುತ್ತಿರುವದಕ್ಕೆ ವ್ಯಕ್ತಿಗಿಂತ ಸಮಾಜವೇ ಕಾರಣ ಎಂಬವದು ಅರಿವಾಗುತ್ತಿದೆ. ಜೈಲಿಗೆ ಹೋದ ವ್ಯಕ್ತಿಗಳಿಗೆ ಹಾರ ಹಾಕಿ ಗೌರವ ನೀಡುವ ಪದ್ಧತಿ ನಿಲ್ಲಬೇಕು. ಸಮಾಜ ಶ್ರೀಮಂತಿಕೆ ಮತ್ತು ಅಧಿಕಾರಕ್ಕೆ ಹೆಚ್ಚು ಮನ್ನಣೆ ಕೊಡುತ್ತಿರುವದು ಸಮಾಜಕ್ಕೆ ತೊಡಕ್ಕಾಗುತ್ತಿದೆ. ಇದರಿಂದ ಸಾಮಾಜಿಕ ಮೌಲ್ಯ ಕುಸಿಯುತ್ತಿದೆ ಎಂದರು.ಹೋದ ವ್ಯಕ್ತಿಗಳಿಗೆ ಹಾರ ಹಾಕಿ ಗೌರವ ನೀಡುವ ಪದ್ಧತಿ ನಿಲ್ಲಬೇಕು. ಸಮಾಜ ಶ್ರೀಮಂತಿಕೆ ಮತ್ತು ಅಧಿಕಾರಕ್ಕೆ ಹೆಚ್ಚು ಮನ್ನಣೆ ಕೊಡುತ್ತಿರುವದು ಸಮಾಜಕ್ಕೆ ತೊಡಕ್ಕಾಗುತ್ತಿದೆ. ಇದರಿಂದ ಸಾಮಾಜಿಕ ಮೌಲ್ಯ ಕುಸಿಯುತ್ತಿದೆ ಎಂದರು.
ಮುಂದಾಗಬೇಕು ಎಂದರು. ಮೈಸೂರು ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಸಮಾಜಕ್ಕೆ ಉತ್ತಮ ಸೇವೆ ನೀಡುವದು ನಮ್ಮಲ್ಲಿ ಅನುವಂಶಿಕವಾಗಿ ಬೆಳೆದು ಬಂದಿದೆ. ಇದನ್ನು ಕಾಪಾಡಿಕೊಳ್ಳುವ ಅವಶ್ಯಕತೆ ಹೆಚ್ಚಿದೆ. ಭವಿಷ್ಯದಲ್ಲಿ ಉತ್ತಮ ಬಾಂಧವ್ಯ ಕಟ್ಟುವ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಮುಂದಾಗಬೇಕು ಎಂದು ಕರೆ ನೀಡಿದರು.
ಬೆಂಗಳೂರು ರಾಜೀವ್ ಗಾಂಧಿ ವಿಜ್ಞಾನ ವಿಶ್ವ ವಿದ್ಯಾಲಯದ ಮಾಜಿ ನಿರ್ದೇಶಕ ಡಾ. ಕೆ. ಆರ್. ಪುತ್ತುರಾಯ ಮಾತನಾಡಿ, ಅವಿಭಕ್ತ ಕುಟುಂಬ ಪದ್ಧತಿ ಮರೆಯಾಗುತ್ತಿದ್ದಂತೆ ಉತ್ತಮ ಶಿಕ್ಷಣದ ಕೊರತೆ ಕಾಡುವಂತಾಗಿದೆ ಎಂದರು. ಕುಟುಂಬದಿಂದಲೇ
(ಮೊದಲ ಪುಟದಿಂದ) ಸಂಸ್ಕಾರಗಳು ಹೊರಬರಬೇಕು, ಇಂತಹ ಪದ್ಧತಿಯನ್ನು ಮುಂದುವರಿಸುವ ಅವಶ್ಯಕತೆ ಇದೆ ಎಂದರು.
ವಿದ್ಯಾರ್ಥಿ ನಾಯಕರುಗಳಾದ ನೆಲ್ಲಮಕ್ಕಡ ವಿಘ್ನೇಶ್, ಚಮ್ಮಟೀರ ಹರ್ಷಿ ಪಾರ್ವತಿ, ಮಂಗೇರಿರ ಪೂವಮ್ಮ, ರಿಕಿನ್ ಉತ್ತಪ್ಪ, ಪಳೆಯಂಡ ಬೆಳ್ಯಪ್ಪ, ಮಾಳೇಟೀರ ನಯನ ಲೋಕೇಶ್ ಅವರುಗಳನ್ನು ಈ ಸಂದರ್ಭ ಗೌರವಿಸಲಾಯಿತು.
ಕಾವೇರಿ ವಿದ್ಯಾ ಸಂಸ್ಥೆ ಸ್ಥಾಪನೆಗೆ ಕಾರಣಕರ್ತರಾದ ಚೆಕ್ಕೇರ ಬಿ. ಮುತ್ತಣ್ಣ ಅವರ ಪುತ್ತಳಿಯನ್ನು ಕಾಲೇಜು ಆವರಣದಲ್ಲಿ ನಿವೃತ್ತ ಲೋಕಾಯುಕ್ತ ಎನ್, ಸಂತೋಷ್ ಹೆಗ್ಡೆ ಅನಾವರಣಗೊಳಿಸಿದರು. ಕಾವೇರಿ ವಿದ್ಯಾ ಸಂಸ್ಥೆ ನಡೆದು ಬಂದ ಹಾದಿಯ ಮಾಹಿತಿ ಹೊತ್ತಿರುವ ‘ಕಾವೇರಿ ಪಥ’ ಸಂಚಿಕೆಯನ್ನು ಮೈಸೂರು ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಬಿಡುಗಡೆಗೊಳಿಸಿದರು. ಈ ಸಂದರ್ಭ ಕಾವೇರಿ ಎಜುಕೇಶನ್ ಸೊಸೈಟಿ ಸ್ಥಾಪಕ ನಿರ್ದೇಶಕ ಬುಟ್ಟಿಯಂಡ ಚೆಂಗಪ್ಪ, ಅಧ್ಯಕ್ಷ ಡಾ. ಎ. ಸಿ. ಗಣಪತಿ, ಉಪಾಧ್ಯಕ್ಷ ಸಿ. ಬಿ. ದೇವಯ್ಯ, ಸಲಹೆಗಾರ ಕೆ. ಎ. ಚಿಣ್ಣಪ್ಪ, ಪ್ರಾಂಶುಪಾಲರುಗಲಾದ ಪ್ರೊ. ಪಿ. ಎ. ಪೂವಣ್ಣ, ಪ್ರೊ. ಸಿ. ಎಂ. ನಾಚಪ್ಪ, ಎಸ್. ಎಸ್. ಮಾದಯ್ಯ, ಎನ್. ಎಂ. ನಾಣಯ್ಯ, ಕೆ ಶ್ರೀನಿವಾಸ್ ಉಪಸ್ಥಿತರಿದ್ದರು.
ಸಾಲ್ಡಾನ, ಪೂವಮ್ಮ, ಅಕ್ರಂ ಹಾಗೂ ಭಾರತಿ ನಿರೂಪಿಸಿದರು. ಕುಸುಂ ತಂಡ ಪ್ರಾರ್ಥಿಸಿದರು. ಕೆ. ಜಿ. ಉತ್ತಪ್ಪ ಸ್ವಾಗತಿಸಿದರು. ಡಾ. ರೇಖಾ ವಸಂತ್ ಕಾವೇರಿ ವಿದ್ಯಾ ಸಂಸ್ಥೆ ನಡೆದು ಬಂದ ಹಾದಿಯ ಬಗ್ಗೆ ತಿಳಿಸಿದರು.
ವರದಿ : ಸುದ್ದಿಪುತ್ರ
ನೋಟಾಕ್ಕೆ ಮತ ನೀಡಿ - ಸಂತೋಷ್ ಹೆಗ್ಡೆ
‘ನೋಟಾ’ಕ್ಕೆ ಮತ ಹಾಕುವ ಮೂಲಕ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಅವಕಾಶವಿದೆ ಎಂದು ನಿವೃತ್ತ ಲೋಕಾಯುಕ್ತ ಎನ್. ಸಂತೋಷ್ ಹೆಗ್ಡೆ ಹೇಳಿದರು. ಮಾಧ್ಯಮದೊಂದಿಗೆ ಮಾತನಾಡಿ, ಚುನಾವಣೆಯ ಸಂದರ್ಭದಲ್ಲಿ ಎಲ್ಲರೂ ಮತ ಚಲಾಯಿಸಬೇಕು. ಉತ್ತಮ ಪ್ರಜೆಯನ್ನು ಆಯ್ಕೆ ಮಾಡುವದು ಎಲ್ಲರ ಕರ್ತವ್ಯವಾಗಿದೆ. ಉತ್ತಮ ಪ್ರಜೆಯನ್ನು ಆಯ್ಕೆ ಮಾಡಲು ಗೊಂದಲಗಳಿದ್ದಲ್ಲಿ ಯಾವದೋ ಪಕ್ಷಕ್ಕೆ ಮತ ಹಾಕುವದನ್ನು ಬಿಟ್ಟು ‘ನೋಟ’ಕ್ಕೆ ಮತ ಚಲಾಯಿಸಿ, ಉತ್ತಮ ಅಭ್ಯರ್ಥಿಯನ್ನು ಗೆಲ್ಲಿಸಬಹುದು ಎಂದರು.
ನ್ಯಾಯಾಂಗದ ಮೇಲೆ ಜನರಿಗೆ ಅಪಾರ ಪ್ರಮಾಣದ ನಂಬಿಕೆ ಇದೆ, ಆದರೆ, ಇತ್ತೀಚಿನ ದಿನಗಳಲ್ಲಿ ನ್ಯಾಯಾಂಗದಲ್ಲಿ ಬಿನ್ನಾಭಿಪ್ರಾಯಗಳನ್ನು ಹೊರತರುತ್ತಿರುವದು ಸರಿಯಲ್ಲ, ಯಾವದೇ ಬಿನ್ನಾಭಿಪ್ರಾಯಗಳನ್ನು ನ್ಯಾಯಾಂಗದ ಒಳಗೆ ಎಲ್ಲಾರ ಸಮ್ಮುಖದಲ್ಲಿ ಪರಿಹರಿಸಿಕೊಳ್ಳಬೇಕು. ಹೊರಗಿನ ಪ್ರಪಂಚಕ್ಕೆ ತಿಳಿಸಬಾರದು ಎಂದು ಹೇಳಿದರು.
ಅಮಿತ್ ಷಾ ಭೇಟಿ ಮಾಹಿತಿ ಇಲ್ಲ
ನನಗೆ ರಾಜಕೀಯದಲ್ಲಿ ಆಸಕ್ತಿಯಿಲ್ಲ. ಹಲವಾರು ಬಾರಿ ಇದನ್ನು ನಾನು ಸ್ಪಷ್ಟಪಡಿಸಿದ್ದೇನೆ ಈವರೆಗೆ ಸಮಾಜಸೇವೆಯಲ್ಲಿ ತೊಡಗಿಸಿಕೊಂಡು ಬಂದಿದ್ದೇನೆ. ಸಮಾಜ ಸೇವೆಯನ್ನು ಮುಂದುವರೆಸುತ್ತೇನೆ ಎಂದು ಮೈಸೂರು ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾಧ್ಯಮದೊಂದಿಗೆ ಹೇಳಿದರು. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಮೈಸೂರಿಗೆ ಭೇಟಿ ನೀಡುತ್ತಿರುವ ವಿಷಯದ ಬಗ್ಗೆ ನನಗೆ ಮಾಹಿತಿ ಇಲ್ಲ. ಈಗಷ್ಟೆ ಮಾಹಿತಿ ನಿಮ್ಮಿಂದ ದೊರೆಯುತ್ತಿದೆ. ನಾನು ಯಾವದೇ ರಾಜಕೀಯ ಪಕ್ಷದ ಪರ ಪ್ರಚಾರದಲ್ಲಿ ತೊಡಗಿಸಿಕೊಳ್ಳುವದಿಲ್ಲ ಎಂದರು.