ನಾಪೆÇೀಕ್ಲು, ಮಾ. 28: ವೆಸ್ಟ್ ಕೊಳಕೇರಿ ಗ್ರಾಮದ ಬೇಟೆಗಾರ ಅಯ್ಯಪ್ಪ ದೇವಸ್ಥಾನಕ್ಕೆ ತೆರಳುವ ರಸ್ತೆಯ ರೂ. 2 ಲಕ್ಷ ವೆಚ್ಚದ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ನಾಪೆÇೀಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎ. ಇಸ್ಮಾಯಿಲ್ ತಾ. 24 ರಂದು ಚಾಲನೆ ನೀಡಿದರು. ಈ ಸಂದರ್ಭ ಉಪಾಧ್ಯಕ್ಷ ಕಾಳೆಯಂಡ ಸಾಬಾ ತಿಮ್ಮಯ್ಯ, ಸದಸ್ಯ ಮಹಮ್ಮದ್ ಖುರೇಶಿ, ಗ್ರಾಮಸ್ಥರಾದ ಕಲಿಯಂಡ ಹ್ಯಾರಿ ಮಂದಣ್ಣ, ಕೌಶಿಕ್, ಕಾಂಡಂಡ ಕಾರ್ಯಪ್ಪ, ಬೊಟ್ಟೋಳಂಡ ರಮೇಶ್ ಮೊಣ್ಣಯ್ಯ, ಕಾಂಡಂಡ ರಮೇಶ್ ಇದ್ದರು.