ಶನಿವಾರಸಂತೆ, ಮಾ. 28: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಜಿಲ್ಲಾ ಪಂಚಾಯಿತಿ ವತಿಯಿಂದ ತುರ್ತು ಚಿಕಿತ್ಸೆಗಾಗಿ ನೀಡಲಾದ ಆಂಬ್ಯುಲೆನ್ಸ್‍ಗೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ತಾ. 24 ರಂದು ಚಾಲನೆ ನೀಡಿದರು. ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯ ಪುಟ್ಟರಾಜು, ಸರೋಜಮ್ಮ, ತಾಲೂಕು ಪಂಚಾಯಿತಿ ಸದಸ್ಯ ಬಿ.ಎಸ್. ಅನಂತಕುಮಾರ್, ದುಂಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಜೆ. ಗಿರೀಶ್, ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಗಿರೀಶ್, ಕಚೇರಿ ಅಧೀಕ್ಷಕ ಎಂ.ಎಸ್. ಗಿರೀಶ್, ಸಿಬ್ಬಂದಿ ನವೀನ್ ಕುಮಾರ್, ರಾಖಿ ಜೇಖಬ್, ಗೀತಾಮಣಿ, ಹೆಚ್. ರಾಜು, ಪ್ರಮುಖರಾದ ಎಸ್.ಎನ್. ರಘು, ಆದಿಲ್ ಪಾಶ, ಡಿ.ಪಿ. ಬೋಜಪ್ಪ, ಹೆಚ್.ಆರ್. ಹರೀಶ್ ಹಾಗೂ ಕರವೇ ಪದಾಧಿಕಾರಿಗಳು ಹಾಜರಿದ್ದರು.